ಅರಕಲಗೂಡಿನಲ್ಲಿ ಮಾಸ್ಕ್ ಧರಿಸಲ್ಲ,ಲಾಕ್‌ಡೌನ್ ಲೆಕ್ಕಕ್ಕಿಲ್ಲ..

ಅರಕಲಗೂಡು(ಹಾಸನ): ಪಟ್ಟಣದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಾಮಾಜಿಕ ಅಂತರ ಅನ್ನುವುದು ಮರೀಚಿಕೆಯಾಗುತ್ತಿದೆ.
ಸದ್ಯ ಇಂದು ಕರ್ನಾಟಕ ಬ್ಯಾಂಕ್‌ನಲ್ಲಿ ಸಾಮಾಜಿಕ ಅಂತರ ಕಾಪಾಡದೇ ನೂಕು ನುಗ್ಗಲು ಏರ್ಪಟ್ಟಿತ್ತು.
ಬೆಳಗ್ಗೆ ಬಾಗಿಲು ತೆಗೆಯುವ ಮುನ್ನವೇ ಗ್ರಾಹಕರು ಬ್ಯಾಂಕ್ ಮುಂದೆ ಸೇರತೊಡಗಿದರು.೧೦.೩೦ಕ್ಕೆ ಬ್ಯಾಂಕ್ ಓಪನ್ ಆದ ಕೂಡಲು ಸಾಮಾಜಿಕ ಅಂತರ ಲೆಕ್ಕಿಸದೆ ಜನರು ಗುಂಪಿನಲ್ಲಿ ತೆರಳಲು ಶುರು ಮಾಡಿದರು. ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು.
ಸರದಿ ಸಾಲು ನಿಂತಿದ್ದ ಜನರು ಸಾಮಾಜಿಕ ಅಂತರ ಕಾಪಾಡುವುದಿರಲಿ ಕನಿಷ್ಠ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ, ಇದರಿಂದ ಕೆಲವೇ ಕೆಲವರಷ್ಟೆ ಸಿಟ್ಟಿನಿಂದ ಸಾಲು ತೊರೆದು ಹೊರ ನಡೆಯಬೇಕಾಯಿತು.
ಕೊರೊನಾ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಪಕ್ಕದಲ್ಲಿರುವ ಎಟಿಎಂ ನಲ್ಲೂ ಜನಸಂದಣಿ ಇದ್ದು ಸಂಬAಧಪಟ್ಟವರು ಇತ್ತ ಗಮನ ಹರಿಸಿ ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಎ.ಎಸ್.ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment