ಪಾವಗಡದ 6 ಸಾವಿರ ನಿರ್ಗತಿಕರಿಗೆ ದಿನಸಿ ಕಿಟ್

ಪಾವಗಡ(ತುಮಕೂರು): ಪಟ್ಟಣದ ಪುರಸಭೆ ಅವರಣದಲ್ಲಿ ಸುಮಾರು ಆರು ಸಾವಿರ ನಿರ್ಗತಿಕರ ಕುಟುಂಬ ಸದಸ್ಯರಿಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಮಣಪ್ಪ ದಿನಸಿ ಕಿಟ್ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ದಿನಸಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪಾವಗಡ ರೊಪ್ಪ ಮತ್ತು ವೈ.ಎನ್.ಹೊಸಕೋಟೆ ಕೆಲವು ನಿರ್ಗತಿಕರ ಕುಟುಂಬಗಳು ಸೇರಿ ಸುಮಾರು ಆರು ಸಾವಿರ ಕುಟುಂಬಕ್ಕೆ ದಿನಸಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ಹೆಚ್.ವಿ.ವೆಂಕಟೇಶ ಮಾತನಾಡಿ,ಪಟ್ಟಣದ ೨೩ ವಾರ್ಡ್ಗಳಲ್ಲಿ ಕಡುಬಡತನದ ಜನರನ್ನು ಹಾಗೂ ನಿರ್ಗತಿಕರ ಕುಟುಂಬ ಸದ್ಯಸರನ್ನು ಗುರ್ತಿಸಿ ಅವರಿಗೆ ದಿನಸಿ ಕಿಟ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ವೇಳೆ ಹಿರಿಯ ಮುಖಂಡ ತಾಳೆಮರದ ನರಸಿಂಹಯ್ಯ, ಮಾಜಿ ಪುರಸಭೆ ಸದಸ್ಯರುಗಳಾದ ಫಜ್ಲುಸಾಬ್, ಅನ್ವರ್ ಸಾಬ್, ಎ.ಶಂಕರ್‌ರೆಡ್ಡಿ, ಅಂಜನ್ ಕುಮಾರ್, ಆರ್.ಕೆ.ನಿಸಾರ್, ರಾಜೇಶ್, ಪ್ರಮೋದ್,ವಿಶ್ವನಾಥ,ಇಮ್ರಾನ್, ರವಿ, ಮಣಿ, ವೇಲುಮುರಘನ್, ರವಿ ಇತರರು ಹಾಜರಿದ್ದರು.

ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ(ತುಮಕೂರು)

Please follow and like us:

Related posts

Leave a Comment