ಬೆಂಗಳೂರಿಗರ ನಿದ್ದೆಗೆಡಿಸಿದ ಆ ಒಂದೇ ಒಂದು ಕೇಸ್..

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಬೆಳಗಿನ ವರದಿಯಂತೆ
೧೬ ಕೇಸ್‌ಗಳು ಪತ್ತೆಯಾಗಿವೆ.
ಸದ್ಯ ಬೆಂಗಳೂರಿನಲ್ಲಿ ೯, ವಿಜಯಪುರ ೨, ಹುಬ್ಬಳ್ಳಿ ಧಾರವಾಡ ೨, ದ.ಕ. ಬಂಟ್ವಾಳ ೧, ಮಂಡ್ಯ ಮಳವಳ್ಳಿ ೨ ಕೇಸ್‌ಗಳು ಪತ್ತೆಯಾಗಿವೆ.
ಅಂದ ಹಾಗೇ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಪಿ-೪೧೯ರ ಬಿಹಾರಿ ಮೂಲದ ಕಾರ್ಮಿಕ ೯ ಜನರಿಗೆ ಸೋಂಕು ಹಬ್ಬಿಸಿದ್ದಾನೆ.
ಈ ೯ ಜನರು ಒಂದೇ ರೂಂನಲ್ಲಿದ್ದರು ಎಂಬುದು ತಿಳಿದು ಬಂದಿದೆ.
ಇನ್ನು ಹುಬ್ಬಳ್ಳಿಯಲ್ಲಿ ಪಿ-೨೩೬ ರ ಸೋದರಿ ಮತ್ತು ಸೋದರಿ ಪುತ್ರಿಗೆ ಸೋಂಕು ಬಂದಿದೆ.ಚಿಕ್ಕಮ್ಮನ ಮನೆಗೆ ರಜೆಗೆ ಬಂದಿದ್ದ ಸಂದರ್ಭದಲ್ಲಿ ಸೋಂಕು ಹರಡಿದೆ. ಪಿ-೩೯೦ರ ಸೋಂಕಿತನಿAದ ಬಂಟ್ವಾಳದ ೭೮ ವರ್ಷದ ವೃದ್ಧೆಗೆ ಸೋಂಕು ತಗುಲಿದೆ.
ಪಿ-೧೭೧, ಪಿ-೩೭೧ರ ಸಂಪರ್ಕದಿAದ ಮಂಡ್ಯದ ೪೭ ವರ್ಷದ ಪುರುಷನಿಗೆ ಸೋಂಕು ತಗುಲಿದೆ.ಮಳವಳ್ಳಿಯ ೨೮ ವರ್ಷದ ಮಹಿಳೆಗೆ ಪಿ-೧೭೯ರ ಸಂಪರ್ಕದಿAದ ಸೋಂಕು ತಗುಲಿದೆ.
ಇದೇ ವೇಳೆ ಬಿಹಾರಿ ಕಾರ್ಮಿಕನ ಶೆಡ್ ಪಕ್ಕ ಇನ್ನೂ ೩೦೦ ಮಂದಿ ವಾಸವಾಗಿದ್ದ ಪರಿಣಾಮ ಇದೀಗ ಮತ್ತೆ ಕೊರೊನಾ ಸೋಂಕು ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ.
ಇಲ್ಲದಲ್ಲದೆ,ಹೊಗಸAದ್ರದಲ್ಲಿ ಎಲ್ಲಾ ಕಾರ್ಮಿಕರು ಬಿಹಾರ ಹಾಗೂ ಮಧ್ಯಪ್ರದೇಶದವರಾಗಿದ್ದು,ಕೆಲವರು ಮೆಟ್ರೋ ಕಾಮಗಾರಿಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.ಜೊತೆಗೆ ಇದೀಗ ಕಾರ್ಮಿಕ ವಾಸವಿದ್ದ ಹೊಗಸಂದ್ರದ ವಿದ್ಯಾಜ್ಯೋತಿನಗರದ ಏರಿಯಾವನ್ನೇ ಸೀಲ್‌ಡೌನ್ ಮಾಡಲಾಗಿದ್ದು,ಕಟ್ಟೇಚ್ಚರ ವಹಿಸಲಾಗಿದೆ.
ವಿಪರ್ಯಾಸವೆಂದರೆ ಅಲ್ಲಿ ವಾಸವಿದ್ದ ಎಲ್ಲಾ ಕಾರ್ಮಿಕರು ಒಂದೇ ಕಡೆ ಊಟ,ಕಟಿಂಗ್ ಸೇರಿದಂತೆ ಇತರೆ ನಿತ್ಯಕರ್ಮಗಳು ಮುಗಿಸುತ್ತಿದ್ದರು ಎನ್ನಲಾಗಿದ್ದು,ಇದೇ ಈಗ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment