ರಾಜ್ಯದಲ್ಲಿ 18 ಹೊಸ ಕೇಸ್ ಪತ್ತೆ, ಸೋಂಕಿತರ ಸಂಕ್ಯೆ 463ಕ್ಕೆ ಏರಿಕೆ..

ಬೆಂಗಳೂರು: ರಾಜ್ಯದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಒಟ್ಟು ೧೮ ಪ್ರಕರಣಗಳು ಪತ್ತೆಯಾಗಿದ್ದು ಬೆಂಗಳೂರು ಒಂದರಲ್ಲೇ ೧೧ ಪ್ರಕರಣಗಳು ಪತ್ತೆಯಾಗಿದ್ದು,ತಲಾ ೫ ಪ್ರಕರಣಗಳು ಪಾದರಾಯನಪುರ ಹಾಗೂ ಹೊಂಗಸAದ್ರದ ನಂಟು ಹೊಂದಿದೆ.
ಇನ್ನು ಪಿ-೪೪೬ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ೪೯ ವರ್ಷದ ಮಹಿಳೆಗೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನುಳಿದಂತೆ ತುಮಕೂರಿನಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಕಳೆದ ೨೫ ದಿನಗಳಿಂದ ಕೋವಿಡ್ ೧೯ ಪಾಸಿಟಿವ್ ಪ್ರಕರಣ ಕಂಡು ಬಂದಿರಲಿಲ್ಲ. ಮೂರು ದಿನ ಹೀಗೆ ಕಳೆದಿದ್ದರೆ ಅದು ಕೊರೋನಾ ಮುಕ್ತ ಜಿಲ್ಲೆಯಾಗುತ್ತಿತ್ತು. ಆಷ್ಟು ಹೊತ್ತಿಗೆ ಪಿ-೪೪೭ರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತ ಗುಜರಾತ್ ಮೂಲದ ವ್ಯಕ್ತಿಯಾಗಿದ್ದು, ಮಾರ್ಚ್ ೧೨ ರಂದು ತುಮಕೂರಿಗೆ ಆಗಮಿಸಿದ್ದರು. ಮತ್ತೆ ಊರಿಗೆ ಹಿಂತಿರುಗಬೇಕು ಅನ್ನುವಷ್ಟರಲ್ಲಿ ಲಾಕ್ ಡೌನ್ ಘೋಷಣೆಯಾಗಿತ್ತು. ಹೀಗಾಗಿ ಅವರು ತುಮಕೂರಿನಲ್ಲೇ ಉಳಿದುಕೊಂಡಿದ್ದರು.
ಪಿ.ಎಚ್. ಕಾಲೋನಿಯ ಮಸೀದಿಯಲ್ಲಿ ವಾಸವಿದ್ದ ಇವರ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಪಿ.ಎಚ್ ಕಾಲೋನಿಯನ್ನು ಕಂಟೈನ್ಮೆAಟ್ ಜೋನ್ ಎಂದು ಘೋಷಿಸಲಾಗಿದೆ.
ಇನ್ನು ಬಾಗಲಕೋಟೆಯಲ್ಲಿ ೨, ಬೆಳಗಾವಿಯಲ್ಲಿ ೨, ತುಮಕೂರಿನಲ್ಲಿ ೧, ಚಿಕ್ಕಬಳ್ಳಾಪುರ ೧, ವಿಜಯಪುರದಲ್ಲಿ ೧ ಕೇಸ್ ಪತ್ತೆಯಾಗಿದೆ.
ಬೆಳಗಾವಿಯ ರಾಯಭಾಗದಲ್ಲ್ಲಿ ೧೦ ವರ್ಷದ ಬಾಲಕಿ ಹಾಗೂ ೧೮ ವರ್ಷದ ಬಾಲಕನಿಗೆ ಸೋಂಕಿತ ವ್ಯಕ್ತಿಯಿಂದ ಸೋಂಕು ತಗುಲಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment