ಸ್ಯಾನಿಟೈಸಿಂಗ್ ಟನಲ್ ಮೂಲಕ ಠಾಣೆಗೆ ಪೊಲೀಸರ ಪ್ರವೇಶ

ಶಿರಾ(ತುಮಕೂರು): ಕೊರೊನಾ ವೈರಸ್ ಮುಕ್ತ ಭಾರತ ನಿರ್ಮಾಣಕ್ಕೆ ವೈದ್ಯರು, ಪೊಲೀಸರು, ವಿಜ್ಞಾನಿಗಳು ಸೇರಿದಂತೆ ಹಲವು ಮಂದಿ ಹಗಳಿರುಳು ಶ್ರಮಿಸ್ತಿದ್ದಾರೆ.ಇಂತ ಸಂಕಷ್ಟದ ಪರಿಸ್ಥಿತಿಯಲ್ಲೂ ಹಸಿದವರಿಗೆ ಅನ್ನ ನೀಡಲು ಸಾಕಷ್ಟು ಜನ ಬೀದಿಗಿಳಿದಿದ್ದಾರೆ. ಅಂತಹ ಕೊರೊನಾ ವಾರಿರ‍್ಸ್ಗೆ ಎಲ್ಲರೂ ಸಲಾಂ ಹೊಡೆಯಲೇಬೇಕು.
ಕೊರೊನಾ ಮಹಾಮಾರಿ ವಿರುದ್ಧ ದೇಶವೇ ಹೋರಾಟ ನಡೆಸ್ತಿದೆ. ಅದ್ರಲ್ಲೂ ವೈದ್ಯರು ಮತ್ತು ಪೊಲೀಸರ ಹೋರಾಟ ಎಲ್ಲರಿಗಿಂತ ಮಿಗಿಲಾದ್ದದ್ದು. ಅದರಲ್ಲೂ ಇವರು ಹಗಲು ರಾತ್ರಿ ತಮ್ಮ ಕುಟುಂಬದ ಹಂಗು ತೊರೆದು ಕೊರೊನಾ ವಿರುದ್ಧ ಜನರ ಆರೋಗ್ಯದ ಬಗ್ಗೆ ಕಾಳಜಿಯನ್ನುವಹಿಸುತ್ತಿದ್ದಾರೆ.ಸದ್ಯ ಇಂತಹ ಸಿಬ್ಬಂದಿ ನೆರವಿಗೆ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಹಾಗೂ ಅವರ ಪುತ್ರ ಡಾ.ರಾಜೇಶ್ ಗೌಡ ನಿಂತಿದ್ದಾರೆ.
ಇನ್ನು ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಹಾಗೂ ಡಾ.ರಾಜೇಶ್ ಗೌಡ ಪ್ರಥಮ ಬಾರಿಗೆ ಶಿರಾ ನಗರದ ಆರೋಗ್ಯ ಕೇಂದ್ರದಲ್ಲಿ
ಸ್ಯಾನಿಟೈಸಿAಗ್ ಟನಲ್ ಸ್ಥಾಪಿಸಿದ್ದರು.ಇದೀಗ ನಂತರ ಪೋಲಿಸ್ ಠಾಣೆಯ ಆವರಣದ ಸಹ ಸ್ಯಾನಿಟೈಸಿಂಗ್ ಟನಲ್ ಸ್ಥಾಪಿಸಿದ್ದಾರೆ.
ಅಲ್ಲದೆ, ಠಾಣೆಯಲ್ಲಿ ವಿವಿಧ ಕಡೆಯಿಂದ ಬಂದಿರುವ ಪೊಲೀಸರಿಗೆ ಹಾಗೂ ಹೋಮ್‌ಗಾರ್ಡ್ಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಡಾ.ರಾಜೇಶ್‌ಗೌಡ, ಬೆಂಗಳೂರಿನಲ್ಲಿ ರೇಡಿಯಾಲಜಿಸ್ಟ್ ಕೆಲಸ ನಿರ್ವಹಿಸುತ್ತಿದ್ದಾರೆ.ಸದ್ಯ ಅವರು ಕೊರೊನಾ ವಿರುದ್ಧ ನಿರಂತರವಾಗಿ ಹೋರಾಟ ನಡೆಯುತ್ತಲೇ ತನ್ನ ತಾಲ್ಲೂಕಿನ ಜನರಿಗೆ ತಮ್ಮ ವಿವಿಧ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಸಂಚಾರ ನಡೆಸುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಕಡೆ ಗಮನಹರಿಸಿ ಡಾ.ರಾಜೇಶ್‌ಗೌಡ ಸ್ಯಾನಿಟೈಸಿಂಗ್ ಟನಲ್ ಸ್ಥಾಪಿಸಿದ್ದಾ.ಹೀಗಾಗಿ ಈಗ ಇಲ್ಲಿಗೆ ಬರುವ ಎಲ್ಲರೂ ಸ್ಯಾನಿಟೈಸಿಂಗ್ ಟನಲ್ ಮೂಲಕ ಠಾಣೆಗೆ ಪ್ರವೇಶಿಸುತ್ತಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment