ನಿರ್ಗತಿಕರಿಗೆ ಊಟ ಕೊಡಬೇಡಿ ; ಸಚಿವ ಮಾಧುಸ್ವಾಮಿ ಆದೇಶ

ಶಿರಾ(ತುಮಕೂರು):ಮೇ.೩ರವರೆಗೆ ತುಮಕೂರು ಹಾಗೂ ಶಿರಾ ತಾಲ್ಲೂಕಿನಲ್ಲಿ ಲಾಕ್‌ಡೌನ್‌ನಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಇಂದಿಲ್ಲಿ ಹೇಳಿದ್ದಾರೆ.
ಶಿರಾ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಲಾಕ್‌ಡೌನ್ ಸಂಬAಧ ಚರ್ಚೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೇ.೩ರ ನಂತರ ಸಭೆ ನಡೆಸಿ ರಾಜ್ಯ ಸರ್ಕಾರ ಸರ್ಕಾರದ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ.
ಜೊತೆಗೆ ನಿರ್ಗತಿಕರಿಗೆ ಖಾಸಗಿ ವ್ಯಕ್ತಿಗಳು ನೀಡುತ್ತಿದ್ದ ಊಟವನ್ನು ನಿಲ್ಲಿಸಬೇಕು.ಇದರಿಂದಲೇ ಕೊರೊನಾ ಕಾಯಿಲೆ ಹರಡುವಿಕೆಗೆ ಕಾರಣವಾಗುತ್ತದೆ.ಇದಲ್ಲದೆ,ಸರ್ಕಾರ ಪಡಿತರ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
ಇನ್ನು ತುಮಕೂರಿನಲ್ಲಿ ೭೫ ಲಕ್ಷ ರೂ.ವೆಚ್ಚದಲ್ಲಿ ಕೊರೊನಾ ಟೆಸ್ಟ್ಲ್ಯಾಬ್‌ನ್ನು ಪ್ರಾರಂಭಿಸಲಾಗುವುದು.ಇದುವರೆಗೂ ಶ್ರೀದೇವಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು,ಇನ್ನು ಮುಂದೆ ಈ ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೂ ಸಹ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಶಿಲ್ದಾರ್,ನಗರಸಭೆಯ ಆಯುಕ್ತರು,ತಾ.ಪ.ಇಓ,ಪೋಲಿಸ್ ಅಧಿಕಾರಿಗಳು ಹಾಜರಿದ್ದರು.
ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment