ಸಾವಿಗೂ ಮುನ್ನ ಕೊಲೆ ಸಂಚು ಬಹಿರಂಗಪಡಿಸಿದ ಮಹಿಳೆ..(Exclusive news)

ಕೊರೊನಾ ಗದ್ದಲದ ನಡುವೆ ಭೀಭತ್ಸ ಘಟನೆ.. ವರದಕ್ಷಿಣೆಗಾಗಿ ಗೃಹಿಣಿಗೆ ಬೆಂಕಿ ಇಟ್ಟ ಗಂಡ..

(Exclusive news)

ತುಮಕೂರು : ಆಕೆ ಇನ್ನೇನ್ನೂ ಸಾವಿಗೆ ಬಹಳ ಹತ್ತಿರವಾಗಿದ್ಲು..ಆದ್ರೆ ಆ ಸಮಯದಲ್ಲೇ ಆಕೆ ಹೇಳಿದ್ದು ಮಾತ್ರ ಭಯಾನಕ ಅಪರಾಧದ ಸತ್ಯನಾ..ಅಲ್ಲದೆ,ತನ್ನ ಯಾರೇರೂ ಏನ್ ಮಾಡಿದ್ರೂ..ಹೇಗೆ ಕೊಲ್ಲಲ್ಲು ಪ್ರಯತ್ನಪಟ್ಟರೂ ಎಂಬುದನ್ನು ಕೂಡ ಆಕೆ ಇಂಚಿAಚೂ ಮಾಹಿತಿ ನೀಡಿ ಕೊನೆಗೂ ಉಸಿರು ಬಿಟ್ಟಿದ್ದಾಳೆ.
ಹೌದು,ಇದೆಲ್ಲಾ ನಡೆದಿದ್ದು ತುಮಕೂರು ಜಿಲ್ಲೆಯಲ್ಲಿ.ಸದ್ಯ ಈ ಜಿಲ್ಲೆಯಲ್ಲಿ ಇಂಥಾ ಭೀಭತ್ಸ ಹಾಗೂ ಭಯಾನಕ ಅಪರಾಧವೊಂದು ನಡೆದಿದೆ.
ಅಂದ ಹಾಗೇ ವರದಕ್ಷಿಣೆಗಾಗಿ ಗೃಹಿಣಿಯೊಬ್ಬಳಿಗೆ ಆಕೆ ಗಂಡ ಅತ್ತೆ ಮಾವ ಕಿರುಕುಳ ಕೊಟ್ಟು ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಆಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಘಟನೆ ವಿವರ : ತುಮಕೂರು ತಾಲೂಕಿನ ತೊಂಡೆಗೆರೆ ಬಳಿ ಈ ಘಟನೆ ನಡೆದಿದ್ದು, ಗೌರಮ್ಮ ಗಂಡ ಅತ್ತೆ ಮಾವ ಎಂಬ ರಕ್ಕಸರ ಕೃತ್ಯಕ್ಕೆ ಕೊನೆಯುಸಿರೆಳೆದ ಮಹಿಳೆ.
ಇನ್ನು ಕೊರಟಗೆರೆ ತಾಲೂಕಿನ ಎಲೆರಾಂ ಪುರ ಗ್ರಾಮದ ಗೌರಮ್ಮ ತೊಂಡೆಗೆರೆ ಗ್ರಾಮದ ಕುಮಾರ್‌ನ ಜೊತೆ ವಿವಾಹವಾಗಿತ್ತು.ಆದರೆ ಇತ್ತೀಚಿಗೆ ಗಂಡ ಕುಮಾರ್‌ನಿಂದ ವರದಕ್ಷಿಣೆ ಕಿರುಕುಳ ಹೆಚ್ಚಾಗಿತ್ತು ಎನ್ನಲಾಗಿದೆ.ಜೊತೆಗೆ ಗಂಡನೊAದಿಗೆ ಸೇರಿಕೊಂಡು ಅತ್ತೆ ಮಾವ ಕೂಡ ಈಕೆಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರಂತೆ.ಆದರೆ ಈಕೆ ಮಾತ್ರ ವರದಕ್ಷಿಣೆ ತರಲು ಒಪ್ಪದಿದ್ದಾಗ ಗಂಡ ಕುಮಾರ್ ಹಾಗೂ ಆತನ ತಂದೆ-ತಾಯಿ ನಿನ್ನೇ ಮಧ್ಯಾಹ್ನ ಈಕೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.ಪರಿಣಾಮ ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ಈಕೆ ಕೊನೆಗೂ ಸಾವು ಕಂಡಿದ್ದಾಳೆ.
ಆದರೆ ಈಕೆ ಸಾವಿಗೂ ಮುನ್ನ ವರದಕ್ಷಿಣೆ ನೀಡಿಲ್ಲ ಎಂಬ ಕಾರಣಕ್ಕೆ ಗಂಡ ಕುಮಾರ್ ಹಾಗೂ ಆತನ ತಂದೆ-ತಾಯಿ ನಡೆಸಿಕೊಂಡ ರೀತಿ ಹಾಗೂ ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟಿದ್ದನ್ನು ಸ್ವತಃ ಹೇಳಿಕೊಂಡಿದ್ದು,ಅದನ್ನು ಅಲ್ಲಿದ್ದವರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.
ಒಟ್ಟಾರೆ ಕೊರೊನಾ ಆರ್ಭಟದ ನಡುವೆ ಗೃಹಿಣಿಯೊಬ್ಬಳನ್ನು ಆಕೆಯ ಗಂಡ ಮತ್ತವನ ಮನೆಯವರು ಭೀಕರವಾಗಿ ಬಲಿ ತೆಗೆದುಕೊಂಡಿರುವುದು ನಿಜಕ್ಕೂ ದುರಂತವಾಗಿದ್ದು,ಸದ್ಯ ನರಳಿ ನರಳಿ ಸತ್ತ ಗೌರಮ್ಮಳ ಮೃತ ದೇಹವನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment