ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ

ಪಿರಿಯಾಪಟ್ಟಣ(ಮೈಸೂರು): ದೇಶದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಇರುವ ಇಂತಹ ಲಾಕ್ ಡೌನ್ ಸಂದರ್ಭದಲ್ಲಿ ತಾಲ್ಲೂಕಿನ ಕಡುಬಡವರಿಗೆ, ಗಿರಿಜನರಿಗೆ ,ಕೂಲಿ ಕಾರ್ಮಿಕರಿಗೆ ,ಪಕ್ಷ ಭೇದ ಮರೆತು ಆಹಾರದ ಕಿಟ್ಗಳನ್ನು ವಿತರಿಸಿದ್ದೇನೆ.ಆದರೆ ಇದನ್ನು ಸಹಿಸದ ಕೆಲವು ಬಿಜೆಪಿ ಮುಖಂಡರು ಹಾಗೂ ಪುರಸಭೆ ಸದಸ್ಯರು ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದು,ಇದು ಅವರೆಗೆ ಶೋಭೆ ತರ ತಕ್ಕದ್ದಲ್ಲ ಎಂದು ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ಕಿಡಿಕಾರಿದರು.
ಪಟ್ಟಣದ ತಾಲೂಕು ಪಂಚಾಯಿತಿ ಶಾಸಕರ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರ, ನಾನು ತಾಲೂಕು ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.ಬೈಲುಕುಪ್ಪೆಯ ಟಿಬೆಟಿಯನ್ ಸೆಟ್ಲಮೆಂಟ್ ಅಧಿಕಾರಿಗಳು ೪ ಸಾವಿರ ಲೀಟರ್ ಅಡುಗೆ ಎಣ್ಣೆ ನೀಡಿರುವುದು ಸತ್ಯ.ಇದರ ಜೊತೆಯಲ್ಲಿ ನನ್ನ ವೈಯಕ್ತಿಕವಾಗಿ ಆಹಾರ ಪದಾರ್ಥಗಳನ್ನು ಖರೀದಿಸಿ ಆಹಾರ ಕಿಟ್ ಗಳನ್ನು ಕಡು ಬಡವರಿಗೆ ಹಂಚಿದ್ದೇನೆ ಈ ಸೇವೆಯನ್ನು ಸಹಿಸದ ಕೆಲವು ಜನರು ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.ನನ್ನ ಮೇಲೆ ಕೆಲವು ವಿನಾಕಾರಣ ಅಪಪ್ರಚಾರ ಮಾಡುವವರು ಮೊದಲು ನಾವು ಸರಿಯಾಗಿದ್ದೇವೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಅಲ್ಲದೆ, ತಹಶೀಲ್ದಾರ್‌ಗೆ ಸೂಚನೆ ನೀಡಿ ಕೆಲಸ ಮಾಡುವ ಅಧಿಕಾರ ನನಗಿದೆ.ಅದರಂತೆ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಗೊರಳ್ಳಿ ಜಗದೀಶ್ ಹಾಗೂ ಜೈನ್ ಸಮುದಾಯದ ನಾಕೋಡ ಅಶೋಕ್ ಅವರು ನಾವು ಆಹಾರ ಪದಾರ್ಥಗಳನ್ನಾಗಲಿ ಹಣವನ್ನಾಗಲಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮೈಮುಲ್ ನಿರ್ದೇಶಕ ಪ್ರಸನ್ನ ಹಾಗೂ ಪುರಸಭೆ ಸದಸ್ಯರು ಹಾಜರಿದ್ದರು

ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ(ಮೈಸೂರು)

Please follow and like us:

Related posts

Leave a Comment