ಕುಡಿಯುವ ನೀರಿನ ಯೋಜನೆಗೆ ಬರಪೀಡಿತ ತಾಲ್ಲೂಕಿಗೆ ಒಂದು ಕೋಟಿ..

ತುಮಕೂರು: ಕುಡಿಯುವ ನೀರಿನ ಯೋಜನೆಗಳಿಗಾಗಿ ಬರಪೀಡಿತ ತಾಲ್ಲೂಕಿಗೆ ಒಂದು ಕೋಟಿ ಹಾಗೂ ಇತರೆ ತಾಲ್ಲೂಕಿಗೆ ೫೦ಲಕ್ಷ ರೂ. ಮಂಜೂರಾತಿ ನೀಡಲಾಗಿದೆ.ಈ ಹಣದ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ಕಾರ್ಯಗತಗೊಳಿಬೇಕು ಎಂದು ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಂದ ಹಾಗೇ ಇಂದು ತುಮಕೂರು ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ನಡೆದ ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ನಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶಾಸಕರ ಜೊತೆ ಸೇರಿಕೊಂಡು ಕುಡಿಯುವ ನೀರಿನ ಸೌಲಭ್ಯದ ಬಗ್ಗೆ ಕ್ರಿಯಾ ಯೋಜನೆ ವರದಿ ತಯಾರಿಸಿ ಎಂದು ಖಡಕ್ ಸೂಚನೆ ನೀಡಿದರು.
ಅಲ್ಲದೆ, ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ತಿಪಟೂರು ತಾಲ್ಲೂಕು ಬಿಟ್ಟಿರುವ ಬಗ್ಗೆ ಶಾಸಕರು ಗಮನ ಸೆಳೆದಾಗ ಆಗ ಸಚಿವರು ನಂಜುAಡಪ್ಪ ವರದಿಯಲ್ಲಿ ನಿಮಗೆ ಅನ್ಯಾಯವಾಗಿದೆ ಅದರು ನಾನು ನಿಮ್ಮ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಹಾಗೂ ನೀವು ಕ್ರೀಯಾ ಯೋಜನೆ ವರದಿ ತಯಾರಿಸಿ ಕಳುಹಿಸಿ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment