ಕಳ್ಳ ಬಟ್ಟಿ ಮಾರಾಟ ; ಮಸ್ಕಿಯಲ್ಲಿ ನಾಲ್ವರ ಬಂಧನ

ಲಿಂಗಸೂಗೂರು(ರಾಯಚೂರು):ಕೊವೀಡ್ -೧೯ ವೈರಸ್ ಹರಡುವ ಭೀತಿಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದ್ದು,ಬಹುತೇಕ ಎಲ್ಲಾ ಮದ್ಯದಂಗಡಿಗಳು ಬಂದ್ ಆಗಿವೆ.
ಆದರೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಮದ್ಯದಂಗಡಿಗಳು ಬಂದ್ ಆಗಿರುವ ಬೆನ್ನೆಲ್ಲೆ ಕಳ್ಳಬಟ್ಟಿ ಸಾರಾಯಿ ಮಾರಾಟ ದಂಧೆ ಜೋರಾಗಿದೆ.
ಸದ್ಯ ಈಗಾಗಲೇ ಹಲವು ಕಡೆ ಇಂತಹ ಕಳಬಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದರೂ ಕಳ್ಳಬಟ್ಟಿ ಮಾರಾಟ ಎಗ್ಗಿಲ್ಲದೇ ಸಾಗಿದೆ.
ಸದ್ಯ ಇದೇ ಜಿಲ್ಲೆಯ ಮಸ್ಕಿ ತಾಂಡಾದ ಸಾರ್ವಜನಿಕ ಪ್ರದೇಶದಲ್ಲಿ ಕಳ್ಳಬಟ್ಟಿ ಸಾರಾಯಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ಮೇಲೆ ಮಸ್ಕಿ ಪೊಲೀಸರು ದಾಳಿ ಮಾಡಿ ೨೦ ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ ೪೦೦೦ ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಇನ್ನು ಪ್ರಕರಣ ಸಂಬAಧ ಮಸ್ಕಿ ತಾಂಡಾದ ಡಾಖಪ್ಪ, ಸೀನಪ್ಪ, ರಾಮಪ್ಪ, ಶೇಠಪ್ಪ ಎಂಬುವರನ್ನು ಬಂಧಿಸಿ ಇವರ ವಿರುದ್ಧ ಐಪಿಸಿ ಸೆಕ್ಷನ್ ೨೭೩,೨೮೪ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment