ಪಿಎಂ ಪರಿಹಾರ ನಿಧಿಗೆ ಹಣ ಕೊಟ್ಟ ಇಂಡಿ ತಾಲೂಕಿನ ಪುಟ್ಟ ಬಾಲಕಿ..

ಇಂಡಿ(ವಿಜಯಪುರ): ಇಂಡಿ ತಾಲೂಕಿನಲ್ಲಿ ೭ ವರ್ಷದ ಪುಟ್ಟ ಬಾಲಕಿ ಪಿಗ್ನಿ ಬಾಕ್ಸ್ನಲ್ಲಿ ಕೂಡಿಟ್ಟ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಅಂದ ಹಾಗೇ ತಾಲ್ಲೂಕಿನ ಭತಗುಣಕಿ ಗ್ರಾಮದ ಬಾಲಕಿ ಶ್ರೇಯಾ ದುದಗಿ (೭) ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮೂಲಕ ೧೪೩೫ ರೂಪಾಯಿ ದೇಣಿಗೆ ನೀಡಿದ್ದಾಳೆ.
ಇನ್ನು ಶಾಲೆಗೆ ತೆರಳುವ ವೇಳೆ ಪೋಷಕರು ನೀಡುತ್ತಿದ್ದ ಹೌನ್ನು ಕೂಡಿಟ್ಟಿದ್ದ ಶ್ರೇಯಾ ಇದೀಗ ಅದನ್ನು ತನ್ನ ತಂದೆ ಬಸವರಾಜ ದುದಗಿ ಮೂಲಕ ಗ್ರಾಮೀಣ ಬ್ಯಾಂಕ್‌ಗೆ ಆಗಮಿಸಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾಳೆ.
ಇದೇ ವೇಳೆ ಬ್ಯಾಂಕ್ ವ್ಯವಸ್ಥಾಪಕ ರತ್ನಾಕರ್ ಪಾಟೀಲ್ ಹಾಗೂ ಸಿಬ್ಬಂದಿ ವರ್ಗ ಬಾಲಕಿ ಶ್ರೇಯಾಗೆ ಅಭಿನಂದನೆ ಸಲ್ಲಿಸಿ, ಒಂದನೇ ತರಗತಿ ವ್ಯಾಸಂಗ ಮುಗಿಸಿರುವ ಬಾಲಕಿಯ ಮಾನವೀಯತೆ ದೊಡ್ಡದು ಎಂದು ಕೊಂಡಾಡಿದ್ದು, ದಾನಿಗಳು ಕೊರೊನಾ ಮಹಾಮಾರಿ ತೊಲಗಿಸಲು ಆಶ್ರಯವಾಗಬೇಕು ಎಂದಿದ್ದಾರೆ.

ಶAಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment