ಕೋಲಾರ ಡಿಸಿ ನಗರ ಪ್ರದಕ್ಷಿಣೆ

ಕೋಲಾರ: ಕೋಲಾರ ನಗರದಲ್ಲಿ ಕಳೆದ ರಾತ್ರಿ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹಸಿರು ವಲಯಕ್ಕೆ ನೀಡಿದ್ದ ಲಾಕ್ ಡೌನ್ ಸಡಿಲಿಕೆಯನ್ನು ಹಿಂಪಡೆದು ಎಂದಿನAತೆ ಲಾಕ್ ಡೌನ್ ಬಿಗಿಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸಿ ಸಿಟಿ ರೌಂಡ್ಸನಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದವು. ಅಂಗಡಿ ಮಳಿಗೆ ಎದುರು ಸುರಕ್ಷಿತ ಅಂತರವಿಲ್ಲ, ಮಾಸ್ಕ್ ಬಳಕೆಯಿಲ್ಲದೇ, ನಿಯಮಗಳನ್ನು ಉಲ್ಲಂಘನೆ ಮಾಡಿದ ೧೫ಕ್ಕು ಹೆಚ್ಚು ಮಳಿಗೆಗೆ ಬೀಗ ಹಾಕಿಸಿ ಬೀಗ ಜಪ್ತಿ ಮಾಡಿ ಬೇಕರಿ, ಬಟ್ಟೆ, ಚಪ್ಪಲಿ ವ್ಯಾಪಾರಕ್ಕೆ ನಿಷೇಧ ಹೇರಿದ್ದಾರೆ.
ಬೆಳಗ್ಗೆ ೧೧ ವರೆಗೆ ಮಾತ್ರ ಅಗತ್ಯ ವಸ್ತು ಕೊಳ್ಳಲು ಅವಕಾಶ ನೀಡಲಾಗಿದ್ದು, ಕೋಲಾರ ಗ್ರೀನ್ ಝೋನ್ ಹೋಗಿ ರೆಡ್ ಝೋನ್ ಆಗುವ ಆತಂಕದಲ್ಲಿ ಲಾಕ್ ಡೌನ್ ಸಡಿಲಿಕೆ ಸ್ವಲ್ಪ ಮಟ್ಟಿಗೆ ಜಿಲ್ಲಾಡಳಿತ ಹಿಂಪಡೆದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment