ದಿನಕ್ಕೆ ಏಳು ಗಂಟೆ ತ್ರಿಫೇಸ್ ವಿದ್ಯುತ್ ಕೊಡಿ..

ಅಥಣಿ(ಬೆಳಗಾವಿ):ದಿನಕ್ಕೆ ಏಳು ಗಂಟೆ ತ್ರಿಫೇಸ್ ವಿದ್ಯುತ್ ಕೊಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಕೃಷ್ಣಾ ನದಿ ನೀರು ಹೋರಾಟ ಸಮಿತಿ ಹಾಗೂ ರೈತ ಅಭಿವೃದ್ಧಿ ಸೇವಾ ಸಮಿತಿ ಮನವಿ ಸಲ್ಲಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಮತ್ತು ಬಮ್ನಾಳ ಗ್ರಾಮದಲ್ಲಿ ದಿನಕ್ಕೆ ಎರಡು ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ಸರಬರಾಜು ಆಗುತ್ತಿದ್ದು ಇದರಿಂದಾಗಿ ರೈತರಿಗೆ ತೀವ್ರ ತೊಂದರೆ ಆಗಿದೆ.ಹೀಗಾಗಿ ಇದನ್ನು ಸರಿಪಡಿಸುವಂತೆ ಮನವಿಯಲ್ಲಿ ಸಮಿತಿಗಳು ಒತ್ತಾಯಿಸಿವೆ.
ಅಲ್ಲದೆ, ಕೊರೊನಾ ಸಂಕಷ್ಟದ ನಡುವೆ ಬೆಳೆ ಹಾನಿ ಅನುಭವಿಸುತ್ತಿರುವ ರೈತರ ಜಮೀನಿನಲ್ಲಿ ಬೆಳೆದ ಬೆಳೆಯೂ ಒಣಗುವ ಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ಹೆಸ್ಕಾಂ ಅಧಿಕಾರಿಗಳು ಸಹಕರಿಸಬೇಕು,ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸಮಿತಿಗಳು ತಿಳಿಸಿವೆ.

ಸತೀಶ ಕೋಳಿ ಎಕ್ಸ್ ಪ್ರೆಸ್ ಟಿವಿ ಅಥಣಿ(ಬೆಳಗಾವಿ)

Please follow and like us:

Related posts

Leave a Comment