ತಾಕತ್ ಇದ್ರೆ ನಿಮ್ಮಪ್ಪಂಗೆ ನೀನ್ ಹುಟ್ಟಿದ್ರೆ ಪ್ರೂ ಮಾಡು..!

ತುಮಕೂರು: ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಹಾಗೂ ಜೆಡಿಎಸ್ ಶಾಸಕ ಗೌರಿಶಂಕರ ಮೃತಪಟ್ಟ ವ್ಯಕ್ತಿಯ ಹೆಣದ ವಿಷಯವಾಗಿ ರಾಜಕೀಯ ಆರಂಭಿಸಿದ್ದಾರೆ.
ಕಳೆದ ೨೬ ರಂದು ಕೊರೊನಾ ಸೋಂಕಿನಿAದ ೭೩ ವರ್ಷದ ವೃದ್ಧ ಮೃತಪಟ್ಟಿದ್ದು,ಜಿಲ್ಲಾಡಳಿತ ಎಡವಟ್ಟಿನಿಂದ ಯಾವುದೇ ಮುಂಜಾಗೃತಾ ಕ್ರಮಗಳಿಲ್ಲದೆ ಅಂತ್ಯಕ್ರಿಯೆ ಕೂಡ ಮಾಡಲಾಗಿತ್ತು.ಆದರೆ ಇದೀಗ ವ್ಯಕ್ತಿಯ ಅಂತ್ಯಕ್ರಿಯೆ ರಾಜಕೀಯ ತಿರುವು ಪಡೆದುಕೊಂಡಿದೆ.
ಇನ್ನು ಸೋಂಕಿನಿAದ ಮೃತಪಟ್ಟ ವ್ಯಕ್ತಿಯ ಶವ ಕುಟುಂಬಸ್ಥರಿಗೆ ನೀಡುವಂತೆ ಮಾಡಿದ್ದು ಗೌರಿಶಂಕರ್ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.ನಾಗವಲ್ಲಿಯಲ್ಲಿ ೯೦೦ ಮತಗಳನ್ನ ಹಾಕಿದ್ದಾರೆ.ಹೀಗಾಗಿ ಮೃತದೇಹ ಕೊಡಲೇಬೇಕು ಎಂದು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ,ಈ ಬಗ್ಗೆ ಸಿಎಂಗೆ ತಿಳಿಸಿ ತನಿಖೆ ಮಾಡಿಸುತ್ತೇನೆ ಎಂದು ಸುರೇಶ್ ಗೌಡ ತಿಳಿಸಿದರು.
ಇನ್ನು ಸುರೇಶ್ ಗೌಡ ಆರೋಪಕ್ಕೆ ತೀಕ್ಷಣವಾಗಿ ಉತ್ತರಿಸಿದ ಶಾಸಕ ಗೌರಿಶಂಕರ್ ನಿಮ್ಮಪ್ಪನಿಗೆ ಹುಟ್ಟಿದ್ರೆ ಪ್ರೂವ್ ಮಾಡಿ ತೋರ್ಸು ಎಂದಿದ್ದಾರೆ.
ಇAತಾ ಕಷ್ಟಕಾಲದಲ್ಲಿ ರಾಜಕೀಯ ಮಾಡಬಾರ್ದು, ಅವನೊಬ್ಬ ಅನ್‌ಎಜುಕೇಟೆಡ್,ಯಾವ ಅಧಿಕಾರಿಗೆ ಎಷ್ಟೊತ್ತಲ್ಲಿ ಕಾಲ್ ಮಾಡಿ ಹೇಳಿದ್ದೆ ಹೇಳಿಸ್ಬೇಕು.ತಾಕತ್ ಇದ್ರೆ ನಿಮ್ಮಪ್ಪಂಗೆ ನೀನ್ ಹುಟ್ಟಿದ್ರೆ ಪ್ರೂ ಮಾಡು ಅಂತ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment