ಮದ್ಯ ಸಿಗದೇ ಅರ್ಧ ದಿನ ಕಾದ ಮದ್ಯಪ್ರಿಯರು..

ಶಿರಾ(ತುಮಕೂರು): ಕಳೆದ ೪೨ ದಿನಗಳಿಂದ ಮದ್ಯ ಸಿಗದೇ ಸಂಕಷ್ಟ ಎದುರಿಸಿದ್ದ ಶಿರಾ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಮದ್ಯದ ಪ್ರಿಯರಿಗೆ ಮದ್ಯದ ಅಂಗಡಿ ತೆರೆಯದೆ ಕೆಲಸಮಯ ನಿರಾಶೆ ಮೂಡಿತ್ತು.
ಲಾಕ್‌ಡೌನ್ ಸಂದರ್ಭದಲ್ಲಿ ಕದ್ದು ಮುಚ್ಚಿ ಅಂಗಡಿಗಳ ಮಾಲೀಕರು ಮದ್ಯ ಮಾರಾಟ ಮಾಡಿದ್ದಾರೆ ಎನ್ನುವ ದೂರು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ದಾಸ್ತಾನು ಪರಿಶೀಲಿಸಿದ ನಂತರ ಮಾರಾಟಕ್ಕೆ ಜಿಲ್ಲಾಧಿಕಾರಿ ಅವಕಾಶ ನೀಡಿದ್ದರು.
ಹೀಗಾಗಿ ಇದರಿಂದಲೇ ಕೆಲ ಕಾಲ ಗೊಂದಲ ಉಂಟಾಯಿತು. ನಂತರ ತಾಲ್ಲೂಕು ಅಡಳಿತ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳ ತಪಾಸಣೆ ನಡೆಸಿ ಎಲ್ಲಾ ಬಾರ್‌ಗಳ ಸ್ಟಾಕ್ ಚೆಕ್ ಮಾಡಿದ ನಂತರವೇ ಎಣ್ಣೆ ವಿತರಣೆಗೆ ಅವಕಾಶ ನೀಡಲಾಯಿತು.
ಈ ವೇಳೆ ಬಾರ್ ಸ್ಟಾಕ್ ವ್ಯತ್ಯಾಸ ಕಂಡುಬAದರೆ ತನಿಖೆ ನಡೆಸುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದರು.ಹೀಗಾಗಿ ಪೊಲೀಸರು, ಅಬಕಾರಿ ಹಾಗೂ ಕಂದಾಯ ಅಧಿಕಾರಿಗಳಿಂದ ಎಲ್ಲಾ ಮದ್ಯದಂಗಡಿಗಳ ಪರಿಶೀಲನೆ ನಡೆಸಿಲಾಯಿತು.ಪರಿಣಾಮ ಬೆಳಿಗ್ಗೆಯಿಂದ ಕಾದುಕುಳಿತಿದ್ದ ಮದ್ಯ ಪ್ರಿಯರಿಗೆ ಭಾರೀ ನಿರಾಸೆಯಾಗಿದೆ.ಎಣ್ಣೆ ಸೇವನೆಗೆ ಕಾಯಲೇಬೇಕಾದ ಪರಿಸ್ಥಿತಿ ಕಾಡಿತ್ತು..

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment