ಆನೇಕಲ್ ತಾಲೂಕಿನಲ್ಲಿ ಮಹಿಳಾ ಕಾರ್ಮಿಕೆ ಸಾವು

ಆನೇಕಲ್(ಬೆಂ.ನಗರ): ಆನೇಕಲ್ ತಾಲೂಕಿನ ಇಂಡ್ಲವಾಡಿ ರಸ್ತೆಯ ಸ್ಟ್ರೈಡ್ಸ್ ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕಳೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಸಾವು ಕಂಡಿರುವ ಘಟನೆ ನಡೆದಿದೆ.
ಇಂಡ್ಲವಾಡಿದ ಮಂಜುಳಾ (೨೬) ಮೃತ ಮಹಿಳೆ.ಈಕೆ ಎಂದಿನAತೆ ಬೆಳಿಗ್ಗೆ ಕೆಲಸಕ್ಕೆ ಬಂದಿದ್ದ ಮಂಜುಳಾ ಸಾವನ್ನಪ್ಪಿದ್ದಾಳೆಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಅಂದ ಹಾಗೇ ಕಳೆದ ಹದಿನೈದು ದಿನ ವಿತರಣೆ ಪಾಳಿಯಂತೆ ರಜೆಯಲ್ಲಿದ್ದು,ನಿನ್ನೆಯಿಂದ ಸೇವೆಗೆ ಹಾಜರಾಗಿದ್ದಳು.ಈ ವೇಳೆ ಕೊರೊನಾ ನಿಯಮದಂತೆ ಪ್ರತಿ ಕಾರ್ಮಿಕರಿಗೆ ಪರೀಕ್ಷೆ ನಡೆಸುತ್ತಿದ್ದು. ನಿನ್ನೆಯೂ ಮಂಜುಳಾ ಪರೀಕ್ಷೆಗೆ ಒಳಗಾಗಿ ಆರೋಗ್ಯಪೂರ್ವಕವಾಗಿಯೇ ಕೆಲಸಕ್ಕೆ ಹಾಜರಾಗಿದ್ದಳು ಎಂದು ತಿಳಿದು ಬಂದಿದೆ.
ಆದರೆ ಬೆಳಿಗ್ಗೆ ಕೆಲಸ ಮಾಡುವ ಸಂದರ್ಭದಲ್ಲಿ ಒಬ್ಬಂಟಿಯಾಗಿ ಪಕ್ಕಕ್ಕೆ ತೆರಳಿ ಕುಳಿತು ಕೊಂಡಿದ್ದು, ಹಾಗೆಯೇ ಸಾವನ್ನಪ್ಪಿದ್ದಾಳೆಂದು ಕಾರ್ಖಾನೆ ಮೂಲಗಳು ತಿಳಿಸಿವೆ.
ಇನ್ನು ಸ್ಥಳಕ್ಕಾಗಮಿಸಿದ ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment