ಮನೆ ಬಾಡಿಗೆ, ನೀರು, ವಾಟರ್ ಬಿಲ್ ಕಟ್ಟು ಅನ್ನೋಂಗಿಲ್ಲ..

ತುಮಕೂರು: ಮೈಕ್ರೋ ಫೈನಾನ್ಸ್, ಸಣ್ಣ ಬ್ಯಾಂಕುಗಳು, ಮನೆ ಬಾಡಿಗೆ, ನೀರಿನ ಬಿಲ್,ವಾಟರ್ ಬಿಲ್ ಕಟ್ಟುವಂತೆ ಮೂರು ತಿಂಗಳ ಕಾಲ ಒತ್ತಾಯ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶವಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು,ತಮ್ಮ ವ್ಯಾಪ್ತಿಯಲ್ಲಿ ಇಂತಹ ಪ್ರಕರಣ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ತುಮಕೂರು ತಾಲ್ಲೂಕಿನ ಯತ್ತೇನಹಳ್ಳಿಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದರು.
ಲಾಕ್ ಡೌನ್‌ನಿಂದ ರಾಜ್ಯಾದ್ಯಂತ ಜನರು ಸಂಕಷ್ಟದಲ್ಲಿದ್ದಾರೆ.ಕಟ್ಟಡ ಕೂಲಿ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ರೈತರು ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ.ಇದೀಗ ಲಾಕ್ ಡೌನ್ ಸಡಿಲಿಕೆ ಯಾಗಿದ್ದು ಬಡವರಿಗೆ, ಮದ್ಯಮ ವರ್ಗಕ್ಕೆ ಜೀವನ ನಿರ್ವಹಣೆ ಮಾಡುವುದೆ ದುಸ್ತರವಾಗಿದೆ. ಈ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಗಳು, ಸಣ್ಣ ಬ್ಯಾಂಕ್ ಗಳು ಸಾಲದ ಕಂತುಗಳನ್ನ ಕಟ್ಟಿಸಿಕೊಳ್ಳಲು ಮುಂದಾಗಿದ್ದು ತಮ್ಮ ಸಿಬ್ಬಂದಿಗಳನ್ನ ಮನೆ ಬಾಗಿಲಿಗೆ ಕಳುಹಿಸಿ ಸಾಲ ವಸೂಲಿಗೆ ಮುಂದಾಗಿದ್ದಾರೆ.
ಆದರೆ ಮೈಕ್ರೋ ಫೈನಾನ್ಸ್, ಸಣ್ಣ ಬ್ಯಾಂಕುಗಳು, ಮನೆ ಬಾಡಿಗೆ, ನೀರಿನ ಬಿಲ್, ವಾಟರ್ ಬಿಲ್ ಕಟ್ಟುವಂತೆ ಮೂರು ತಿಂಗಳ ಕಾಲ ಒತ್ತಾಯ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ತಮ್ಮ ವ್ಯಾಪ್ತಿಯಲ್ಲಿ ಇಂತಹ ಪ್ರಕರಣ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.

ಶ್ರೀಮ0ತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment