ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಗೆ ಹೂ ಮಳೆ

ಕೆ.ಆರ್.ಪುರಂ(ಬೆಂ.ನಗರ):ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡಿನ ಎ.ಇ.ಸಿ.ಎಸ್ ಲೇಔಟಿನಲ್ಲಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಪಾಲಿಗೆ ಸದಸ್ಯೆ ಶ್ವೇತಾವಿಜಯ್ ಕುಮಾರ್ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಕೊರೊನಾ ವಾರಿಯರ್ಸ್ಗಳಿಗೆ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇಶ ಕಾಯುವ ಯೋಧರಂತೆ ತಮ್ಮ ಪರಿವಾರವನ್ನು ಬಿಟ್ಟು ಕರೋನಾ ವಿರುದ್ಧ ಹಗಲಿರುಳು ಶ್ರಮಿಸಿದ ವಾರಿಯರ್ಸ್ಗಳಿಗೆ ಸಾರ್ವಜನಿಕರು ಸೇರಿದಂತೆ ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು ರಸ್ತೆ ಉದ್ದಗಲಕ್ಕೂ ಹೂ ಮಳೆ ಸುರಿಸುವ ಮೂಲಕ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ನೂರಾರು ಆಶಾ ಕಾರ್ಯಕರ್ತೆರು, ಪೊಲೀಸ್ ಇಲಾಖೆಯವರು,ಬಿಬಿಎಂಪಿ ಪೌರಕಾರ್ಮಿಕರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆರ್.ಎಸ್.ಎಸ್.ಮುಖಂಡರು, ಅಗ್ನಿಶಾಮಕ ದಳದವರಿಗೆ, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ, ಅಧಿಕಾರಿಗಳು, ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆಂ.ನಗರ)

Please follow and like us:

Related posts

Leave a Comment