ಕಾರ್ಮಿಕರ ರೈಲು ವೆಚ್ಚ ಭರಿಸಲು ಹೊರಟ ಕಾಂಗ್ರೆಸ್

ಬೆಂಗಳೂರು:ಕರ್ನಾಟಕಕ್ಕೆ ವಾಪಸ್ ಬರುವವರಿಗೆ ಅಗತ್ಯ ರೈಲು ಸೇವೆ ಕಲ್ಪಿಸಬೇಕು,ಅದಕ್ಕೆ ತಗಲುವ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಘೋಷಿಸಿದ್ದಾರೆ.
ಈ ಸಂಬAಧ ಇಂದು ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ರಾಜ್ಯಕ್ಕೆ ಬರುವವರಿಗೆ ರೈಲು ಸೇವೆ ಕಲ್ಪಿಸಿಕೋಡಬೇಕಿದ್ದು,ಅದಕ್ಕೆ ಆಗುವ ಹಣವನ್ನು ತಮ್ಮ ಪಕ್ಷ ನೀಡಲಿದೆ ಎಂದು ತಿಳಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment