ಮಳವಳ್ಳಿ ಪಟ್ಟಣದಲ್ಲಿ ಗ್ರಾಮ ದೇವತೆ ಪೂಜೆ,ಕೋಳಿಗಳ ಬಲಿ

ಮಳವಳ್ಳಿ(ಮಂಡ್ಯ): ತಬ್ಲಿಘಿ ಸೋಂಕಿನಿAದ ಕಂಟೋನ್ಮೆAಟ್ ಪ್ರದೇಶವಾಗಿ ಘೋಷಣೆಯಾಗಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಗ್ರಾಮ ದೇವತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಕೋಳಿಗಳನ್ನು ಬಲಿ ನೀಡಿರುವ ಘಟನೆ ನಡೆದಿದೆ.
ಅಂದ ಹಾಗೇ ಮಳವಳ್ಳಿ ಪಟ್ಟಣದಲ್ಲಿ ಸೀಲ್ ಡೌನ್ ಪ್ರದೇಶದಲ್ಲಿ ಊರಿನ ಗ್ರಾಮ ದೇವತೆಯಾದ ದಂಡಿನ ಮಾರಮ್ಮ ದೇವಾಲಯ ಕೂಡ ಸೇರಿತ್ತು.ಆದರೆ ಕಳೆದ ಎರಡು ತಿಂಗಳಿAದ ಈ ದೇವಾಲಯದ ಬಾಗಿಲು ಬಂದ್ ಆಗಿದೆ. ಅಲ್ಲದೆ, ಈ ಬಾರಿ ಕೊರೋನಾ ಕಾರಣದಿಂದ ಸೀಲ್‌ಡೌನ್ ಪ್ರದೇಶಕ್ಕೆ ಎಂಟ್ರಿ ಇಲ್ಲದ ಕಾರಣ ದೇವಿಗೆ ಪೂಜೆ ಪುನಸ್ಕಾರ ಇಲ್ಲದಂತಾಗಿದೆ.
ಇನ್ನು ಗ್ರಾಮ ದೇವತೆ ಪೂಜೆ ನಿಲ್ಲಿಸಿದ್ರೆ ಊರಿಗೆ ಮತ್ತಷ್ಟು ಕೆಡುಕಾಗುತ್ತೆ ಎನ್ನುವ ಕಾರಣಕ್ಕೆ ಊರಿನ ಗ್ರಾಮಸ್ಥರು ಪಟ್ಟಣದ ಎನ್‌ಇಎಸ್ ಬಡಾವಣೆಯ ರಸ್ತೆ ಮದ್ಯೆಯೇ ೩ ಕಲ್ಲುಗಳನ್ನಿಟ್ಟು ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಗ್ರಾಮ ದೇವತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಗ್ರಾಮ ದೇವತೆಗೆ ಮುಂಜಾನೆಯಿAದ ಗ್ರಾಮಸ್ಥರು ಬಂದು ೩ ಕಲ್ಲುಗಳ ಮುಂದೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸುವುದರ ಜೊತೆಗೆ ದೇವಿಯ ಶಾಂತಿಗಾಗಿ ಕೋಳಿಗಳನ್ನು ಕೂಡ ಬಲಿ ನೀಡಿದ್ದಾರೆ. ಗ್ರಾಮದಲ್ಲಿ ಕೊರೋನಾ ಹೆಮ್ಮಾರಿ ಬಂದಿದ್ದು ಅದನ್ನು ಓಡಿಸಿ ಗ್ರಾಮವನ್ನು ರಕ್ಷಿಸುವಂತೆ ಮೊರೆ ಇಟ್ಟಿದ್ದಾರೆ.
ಒಟ್ಟಾರೆ ಬಹಳ ಶಕ್ತಿಯುಳ್ಳ ಗ್ರಾಮ ದೇವತೆಗೆ ಯಾವುದೇ ಕಾರಣಕ್ಕೂ ಪೂಜೆ ನಿಲ್ಲಿಸಬಾರದೆಂಬ ಕಾರಣಕ್ಕೆ ಕೊರೋನಾದಿಂದ ದೇಗುಲದ ಬಾಗಿಲು ಹಾಕಿದರೂ ಇದೀಗ ಪಕ್ಕದ ಬೀದಿಯ ರಸ್ತೆ ಮದ್ಯೆಯೇ ಕಲ್ಲುಗಳಲ್ಲಿ ದೇವಿ ಪ್ರತಿಷ್ಠಾಪಿಸಿ ಮಳವಳ್ಳಿಯ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment