ಕೊಳವೆ ಬಾವಿಗೆ ಜಿಗಿದು ರೈತನ ಆತ್ಮಹತ್ಯೆ

ರಾಯಬಾಗ(ಬೆಳಗಾವಿ): ರೈತನೊಬ್ಬ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಲಕ್ಕಪ್ಪ ಸಂಗಪ್ಪ ದೊಡ್ಡಮನಿ,ಕೊಳವೆ ಬಾವಿಗೆ ಜಿಗಿದು ರೈತ ಆತ್ಮಹತ್ಯೆಗೆ ಮಾಡಿಕೊಂಡ ರೈತ.ಈತ ಸಾಲ ಮಾಡಿ ಕೊಳವೆ ಬಾವಿ ಕೊರಸಿದ್ದ.ಆದರೆ ಈ ಕೊಳವೆ ಬಾವಿಯಲ್ಲಿ ನೀರು ಬಾರದ ಕಾರಣ ಮನನೊಂದು ಅದೇ ಕೊಳವೆಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಸದ್ಯ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ತಹಶೀಲ್ದಾರ್ ಚಂದ್ರಕಾAತ ಭಜಂತ್ರಿ ನೇತೃತ್ವದಲ್ಲಿ ಅಗ್ನಿಶಾಮಕ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸತತ ಎರಡ್ಮೂರು ಗಂಟೆಗಳ ಕಾಲ ಶವ ಹೊರತೆಗೆಯಲು ಕಾರ್ಯಾಚರಣೆ ನಡೆಸಿದರು.
ಸದ್ಯ ಜೆಸಿಬಿ ಮೂಲಕ ಕೊಳವೆಬಾವಿ ಪಕ್ಕ ಅಂದಾಜು ೧೮ ರಿಂದ ೨೦ ಅಡಿ ಆಳ ಭೂಮಿ ಅಗೆದು ಶವವನ್ನು ಹೊರ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಯಬಾಗ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಪಿ.ಎಂ.ಪಾಟೀಲ್ ಎಕ್ಸ್ ಪ್ರೆಸ್ ಟಿವಿ ರಾಯಬಾಗ(ಬೆಳಗಾವಿ)

Please follow and like us:

Related posts

Leave a Comment