ರಾಜಕಾರಣಿಗಳ ಒತ್ತಡಕ್ಕೆ ಮಣಿದ ಮಂಡ್ಯ ಜಿಲ್ಲಾಡಳಿತ?,ಕಾಳ ಸಂತೆಕೋರರಿಗೆ ಮಣೆ..

ನಾಗಮಂಗಲ(ಮಂಡ್ಯ):ರಾಜಕಾರಣಿಗಳ ಒತ್ತಡಕ್ಕೆ ಮಣಿದು,ನ್ಯಾಯಬೆಲೆ ಅಂಗಡಿಗಳ ಅಮಾನತ್ತು ತೆರವುಗೊಳಿಸಿರುವ ಮಂಡ್ಯಜಿಲ್ಲಾಡಳಿತದ ಕ್ರಮಕ್ಕೆ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ,ಮಾಚನಾಯಕನಹಳ್ಳಿ ಮತ್ತು ಹೊನ್ನಾವರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಡಿತರ ಆಹಾರ ಪದಾರ್ಥಗಳ ತೂಕದಲ್ಲಿ ಮೋಸ, ಹಣ ವಸೂಲು ಹಾಗೂ ಬಡವರ ಪಾಲಿನ ಪಡಿತರವನ್ನು ಕಾಳ ಸಂತೆಯಲ್ಲಿ ಅಕ್ರಮ ಮಾರಾಟ ಸೇರಿದಂತೆ ಆಹಾರ ಮತ್ತು ನಾಗರೀಕ ಸರಬರಾಜು ಕಾಯ್ದೆಗಳ ಉಲ್ಲಂಘನೆಯನ್ವಯ ಸಾರ್ವಜನಿಕರ ದೂರಿನ ಮೇರೆಗೆ ಇದೇ ಏ.೧೧ ರಂದು ಅಮಾನತ್ತು ಮಾಡಲಾಗಿತ್ತು.
ಆದರೆ ಈ ಮೂರು ನ್ಯಾಯಬೆಲೆ ಅಂಗಡಿಗಳ ಮಾಲೀಕರನ್ನು ಕನಿಷ್ಠ ಪ್ರಾಥಮಿಕ ತನಿಖೆಯನ್ನೂ ಮಾಡದೆ,ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕೇವಲ ಮೂರೇ ವಾರದಲ್ಲಿ ಅಮಾನತ್ತು ತೆರವುಗೊಳಿಸಿರುವ ಜಿಲ್ಲಾಡಳಿತದ ಕ್ರಮ ಸಾರ್ವಜನಿಕರ ಹಿತಾಸಕ್ತಿಗೆ ಮಾಡಿರುವ ಅನ್ಯಾಯ ಎಂದು ಗ್ರಾಮಸ್ಥರು ಕಿಡಿಕಾರಿದ್ದರೆ.
ಈ ಕೂಡಲೇ ಅಮಾನತ್ತು ತೆರವಿನ ಆದೇಶವನ್ನು ಹಿಂಪಡೆಯುವ ಮೂಲಕ ಈ ಮೂರು ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ದ ಸೂಕ್ತ ತನಿಖೆ ನಡೆಸಬೇಕು,ಆರೋಪಿಗಳ ಅಪರಾಧಕ್ಕೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು,ನ್ಯಾಯಬೆಲೆ ಅಂಗಡಿಗಳ ಪರಾವನಗಿಯನ್ನು ರದ್ದುಗೊಳಿಸಿ, ನಿರುದ್ಯೋಗಿ ಯುವ ಶಕ್ತಿ ಅಥವ ಸ್ವ ಸಹಾಯ ಸಂಘಗಳಿಗೆ ನಿಯಮಾನುಸಾರ ಅವಕಾಶ ಕಲ್ಪಿಸಿಕೊಡುವ ಮೂಲಕ ಸ್ಥಳೀಯ ನಾಗರೀಕರ ಹಕ್ಕುಗಳನ್ನು ಸಂರಕ್ಷಿಸಬೇಕು. ಇಲ್ಲವಾದಲ್ಲಿ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹೊನ್ನಾವರ ಶಂಕರಣ್ಣ ಮತ್ತು ರುದ್ರೇಶ್ ಎಚ್ಚರಿಕೆ ನೀಡಿದ್ದಾರೆ.

ಎಸ್.ವೆಂಕಟೇಶ್. ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮಂಡ್ಯ)

Please follow and like us:

Related posts

Leave a Comment