ಹುಬ್ಬಳ್ಳಿಯಿಂದ ವಿಶೇಷ ರೈಲು ಪ್ರಯಾಣ

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಜೋಧ್‌ಪುರಕ್ಕೆ ಎರಡನೇ ಶ್ರಮಿಕ್ ಎಕ್ಸ್ಪ್ರೆಸ್ ವಿಶೇಷ ರೈಲು ಪ್ರಯಾಣ ಬೆಳೆಸಿತು.
ನಿನ್ನೆ ೧,೪೫೨ ಉತ್ತರ ಭಾರತದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಹೊತ್ತ ರೈಲು ತವರಿನತ್ತ ಪ್ರಯಾಣ ಬೆಳೆಸಿತ್ತು.ಇಂದು ಕೂಡ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಸುಮಾರು ೧,೩೫೦ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ಪ್ರಯಾಣ ಬೆಳೆಸಿದರು.
ಸರಿಸುಮಾರು ೧ ಗಂಟೆ ಸಮಾರಿಗೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ರೈಲು ಹೊರಡಲು ಅಣಿಯಾಗುತ್ತಿದಂತೆ ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆಗಳು ಮೊಳಗಿದವು. ಅದರ ಜೊತಗೆ ಅಧಿಕಾರಿಗಳು ಹಾಗೂ ರೈಲು ಸಿಬ್ಬಂದಿ ಚಪ್ಪಾಳೆ ತಟ್ಟಿ ಪ್ರಯಾಣಿಕರನ್ನು ಬೀಳ್ಕೊಟ್ಟರು.
ಲಾಕ್‌ಡೌನ್‌ನಲ್ಲಿ ಸಿಲುಕಿ ಸ್ವಂತ ಊರುಗಳಿಗೆ ತೆರಳದೆ ಕಾರ್ಮಿಕರು,ವಿದ್ಯಾರ್ಥಿಗಳು ಪರಾಡುತ್ತಿದ್ದರು.ಹೀಗಾಗಿಹುಬ್ಬಳ್ಳಿಯಿಂದ ಮೀರಜ್, ಪುಣೆ, ವಡೋದರ, ಅಹ್ಮದಾಬಾದ್, ಪಾಲನ್‌ಪುರ್ ಮಾರ್ಗವಾಗಿ ಜೋಧ್‌ಪುರ್ ತಲುಪಲಿದೆ.
ನಾಳೆ ಮಧ್ಯಾಹ್ನ ೨:೩೦ಕ್ಕೆ ಜೋಧಪುರ ತಲುಪಲಿದೆ. ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿರುವ ಧಾರವಾಡ ಜಿಲ್ಲಾಡಳಿತ ಆರೋಗ್ಯವಾಗಿರುವವ ಸಂಪೂರ್ಣ ಮಾಹಿತಿ ಪಡೆದು ಕಳುಹಿಸಿಕೊಟ್ಟಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment