ವಿಡಿ ಗಾರ್ಮೆಂಟ್ಸ್ ಎಡವಟ್ಟು, ಬೀದಿಗೆ ಬಿದ್ದ ಕಾರ್ಮಿಕರು..

ಆನೇಕಲ್(ಬೆಂ.ನಗರ):ಈಗಾಗಲೇ ಲಾಕ್ ಡೌನ್ ಆಗಿ ಸಾಕಷ್ಟು ದಿನಗಳು ಕಳೆದಿದೆ ಕೆಲಸ ಇಲ್ಲದೆ ಜನರು ಸಾಕಷ್ಟು ಕಷ್ಟಪಡುತ್ತಿದ್ದಾರೆ ಅದರೀಗ ಸ್ವಲ್ಪ ಮಟ್ಟಿಗೆ ಕಂಪನಿಗಳು ಕೆಲಸ ಆರಂಭವಾಗುತ್ತಿದೆ ಎಂದು ಜನರು ನಿಟ್ಟು ಉಸಿರು ಬಿಟ್ಟುವಷ್ಟರಲ್ಲೇ ಇಲ್ಲೊಂದು ಕಂಪನಿಯು ಕೂಲಿ ಕಾರ್ಮಿಕರಿಗೆ ಶಾಕ್ ನೀಡಿದೆ.
ಹೌದು, ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ವಿಡಿ ಫ್ಯಾಷನ್ಸ್ ಎಂಬ ಗಾರ್ಮೆಂಟ್ಸ್ ಕೇಂದ್ರ ಸರ್ಕಾರದ ಆದೇಶ ಉಲ್ಲಂಘಿಸಿ,ನೂರಾರು ಕಾರ್ಮಿಕರಿಗೆ ಸಂಬಳ ನೀಡದೆ ಅವರ ರಾಜೀನಾಮೆ ಪಡೆದುಕೊಂಡಿದೆ.ಸದ್ಯ ಇದೇ ವಿಷಯವನ್ನು ಇಟ್ಟುಕೊಂಡು ಇಂದು ನೂರಾರು ಕಾರ್ಮಿಕರು ವಿಡಿ ಗಾರ್ಮೆಂಟ್ಸ್ ಎದುರು ಪ್ರತಿಭಟನೆ ನಡೆಸಿದರು.
ಕಳೆದ ವಾರ ಪೋನ್ ಮುಖಾಂತರ ಕರೆ ಮಾಡಿ ನಮ್ಮ ಕಂಪನಿ ಮುಚ್ಚುತ್ತಿದ್ದು, ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿ ವಿಡಿ ಫ್ಯಾಷನ್ಸ್ ಗಾರ್ಮೆಂಟ್ಸ್ ಹೇಳಿತ್ತು.ಹೀಗಾಗಿ ಹಲವರು ರಾಜೀನಾಮೆ ಕೂಡ ನೀಡಿದ್ದರು.ಆದರೆ ಇನ್ನು ಕೆಲವರಿಗೆ ಮಾತ್ರ ೧೫ರಂದು ಗಾರ್ಮೆಂಟ್ಸ್ ತೆರಲಿದೆ ಎಂದು ತಿಳಿಸಿತ್ತು.ಹೀಗಾಗಿ ಈ ಕೆಲ ಕಾರ್ಮಿಕರು ಸಂತಸದಿAದ ಕೆಲಸಕ್ಕೆ ಬಂದ್ರೆ ಏಕಾಎಕಿ ಗಾರ್ಮೆಂಟ್ಸ್ನ್ನೇ ಮುಚ್ಚಲಾಗಿದೆ.
ಇದರ ಹಿನ್ನೆಲೆಯಲ್ಲಿ ನೊಂದ ಕಾರ್ಮಿಕರು ವಿಡಿ ಫ್ಯಾಷನ್ಸ್ ಗಾರ್ಮೆಂಟ್ಸ್ ಎದುರು ಪ್ರತಿಭಟನೆ ನಡೆಸಿದರು.
ಇನ್ನು ವಿಷಯ ತಿಳಿದ ಹೆಬ್ಬಗೋಡಿ ಪೊಲೀಸರು ಕಾರ್ಮಿಕರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾರೆ.
ಒಟ್ಟಾರೆ ಈ ರೀತಿ ಕೊಲಿ ಕಾರ್ಮಿಕರಿಗೆ ವಂಚನೆ ಮಾಡುತ್ತಿರುವ ಕಂಪನಿಗಳ ಮೇಲೆ ಆದಷ್ಟು ಬೇಗ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಲಿ ಎಂಬುವುದು ನಮ್ಮ ವಾಹಿನಿಯ ಆಶಯವಾಗಿದೆ.

ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment