ಪುರಸಭೆ ಸದಸ್ಯ ಪುಟ್ಟಸ್ವಾಮಿಗೆ ತಾಲ್ಲೂಕು ಆಡಳಿತದಿಂದ ಶ್ಲಾಘನೆ

ಮಳವಳ್ಳಿ(ಮಂಡ್ಯ): ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಮಳವಳ್ಳಿ ಪಟ್ಟಣದ ೪ನೇ ವಾರ್ಡ್ನ ಜನರಿಗೆ ಸುಮಾರು ೨೫೦ ಪಡಿತರ ಕಿಟ್‌ಗಳನ್ನು ಪುರಸಭೆ ಸದಸ್ಯ ಪುಟ್ಟಸ್ವಾಮಿ ವಿತರಿಸಿದರು.
ಅಂದ ಹಾಗೇ ಪಟ್ಟಣದ ನ್ಯೂ ಲೈಫ್ ಇಂಟರ್ ನ್ಯಾಷನಲ್ ಬೊರ್ಡಿಂಗ್ ಸ್ಕೂಲ್ ಆವರಣದಲ್ಲಿ ಪಡಿತರ ಕಿಟ್ ವಿತರಣೆಗೆ ತಹಶೀಲ್ದಾರ್ ಚಂದ್ರಮೌಳಿ ಚಾಲನೆ ನೀಡಿದರು.ಬಳಿಕ ಮಾತನಾಡಿ, ಸಂಕಷ್ಟದಲ್ಲಿರುವ ಜನರಿಗೆ ಪುರಸಭೆ ಸದಸ್ಯ ಪುಟ್ಟಸ್ವಾಮಿ ನೆರವಿಗೆ ಬಂದಿದ್ದು,ಅವರಿಗೆ ತಾಲ್ಲೂಕು ಆಡಳಿತ ಅಭಿನಂದಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಗಂಗಾಧÀರ್, ಜಿ.ಪಂ ಸದಸ್ಯೆ ಸುಜಾತ ಸುಂದ್ರಪ್ಪ, ಬೆಂಕಿ ಶ್ರೀನಿವಾಸ್ ,ಜಯರಾಮು,ಶಂಕರ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment