ಗರ್ಭಿಣಿ ಮಹಿಳೆಯ ಚಿಕಿತ್ಸೆಗೆ ನೆರವಾದ ವೈದ್ಯ…

ಶಿರಾ(ತುಮಕೂರು): ರಕ್ತದ ಒತ್ತಡದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಚಿಕಿತ್ಸೆಗೆ ಸಹಾಯ ಮಾಡಿ ಶಿರಾ ತಾಲ್ಲೂಕಿನ ವೈದ್ಯರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಅಂದ ಹಾಗೇ ತಾಲ್ಲೂಕಿನ ಚಿರತ ಹಳ್ಳಿಯ ಸವಿತಾ ಸಮಾಜದ ಬಡ ಕುಟುಂಬದ ಮಂಜುನಾಥ್ ಪತ್ನಿ ಸಂಧ್ಯಾ ಅವರಿಗೆಯೇ ಚಿಕಿತ್ಸೆಗೆ ಸಹಾಯ ಮಾಡಲಾಗಿದೆ. ಸಂಧ್ಯಾ ರಕ್ತದ ಒತ್ತಡ ಬಳಲುತ್ತಿದ್ದು, ಹೆರಿಗೆ ಸಮಯದವರೆಗೆ ಪ್ರತಿದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿದೆ.
ಇದಕ್ಕಾಗಿ ಸುಮಾರು ೯೦ ಸಾವಿರದವರೆಗೆ ಔಷಧೀಯ ಅವಶ್ಯಕತೆ ಇದೆ.ಹೀಗಾಗಿ ಈ ವಿಷಯ ತಿಳಿದ ಬೆಂಗಳೂರಿನ ವಿಕಿರಣ ಶಾಸ್ತçಜ್ಞ ಡಾ|| ಸಿ.ಎಂ.ರಾಜೇಶ್ ಗೌಡ ಸಂಧ್ಯಾ ಅವರ ಚಿಕಿತ್ಸೆಗೆ ನೆರವಾಗಿ ಇತರರಿಗೆ ಮಾದರಿಯಾಗಿದ್ದಾರೆ

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment