ಮಾಶಾಳ ಕ್ವಾರೆಂಟೈನ್‌ಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭೇಟಿ

ಅಫಜಲಪುರ(ಕಲಬುರಗಿ):ಅಫಜಲಪುರ ತಾಲೂಕಿನ ಗಡಿ ಗ್ರಾಮ ಮಾಶಾಳದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಲ್ಲಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭೇಟಿ ನೀಡಿ ಅಲ್ಲಿನ ಜನರ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಹಂತ ಹಂತವಾಗಿ ಎಲ್ಲರಿಗೂ ಈ ವಿಶೇಷ ಪ್ಯಾಕೇಜ್‌ನ ಸೌಲಭ್ಯ ಸಿಗುವುದು.ಹೀಗಾಗಿ ಯಾರೂ ಇನ್ನು ಮುಂದೆ ಆತಂಕ ಪಡದೇ ಉದ್ಯೋಗ ಖಾತ್ರಿಯಿಂದ ಸಿಗುವ ಕೆಲಸದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇನ್ನು ಮಾಜಿ ಸಚಿವ ಭೇಟಿ ವೇಲೆ ಬಿಜೆಪಿ ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯ ಹಾಗರಗಿ, ಮುಖಂಡ ವಿಶ್ವನಾಥ ರೇವೂರ ಹಾಜರಿದ್ದರು.

ಈರಣ್ಣ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)

Please follow and like us:

Related posts

Leave a Comment