ಹುಳಿಯಾರು ಬಸ್ ನಿಲ್ದಾಣದಲ್ಲಿ ಜಾರ್ಖಂಡ್‌ನ 29 ಮಂದಿ

ಹುಳಿಯಾರು(ತುಮಕೂರು): ತಮ್ಮ ರಾಜ್ಯ ಜಾರ್ಖಂಡ್ ತೆರಳಲು ಮುಂದಾಗಿದ್ದ ಸುಮಾರು ೨೯ ಮಂದಿ ಕಾರ್ಮಿಕರು ಹುಳಿಯಾರು ಬಳಿಯೇ ಲಾಕ್ ಆದ ಘಟನೆ ನಡೆದಿದೆ.
ಅಂದ ಹಾಗೇ ವಿವಿಧ ಉದ್ಯೋಗ ಹರಸಿ ಜಾವಾಗಲ್ ಸುತ್ತಮುತ್ತ ಜಾರ್ಖಂಡ್ ಮೂಲದ ಈ ೨೯ ಮಂದಿ ನೆಲೆಯೂರಿದ್ದರು.
ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮ ರಾಜ್ಯ ಜಾರ್ಖಂಡ್ ಹೋಗಲು ಬಸ್ ಮುಖಾಂತರ ಹುಳಿಯಾರಿಗೆ ಆಗಮಿಸಿ ಇಲ್ಲಿಂದ ಲಾರಿಯಲ್ಲಿ ತೆರಳಲು ಮುಂದಾಗಿದ್ದಾರೆ.ಆದರೆ ಪಾಸ್ ಇಲ್ಲದ ಇವರೆಲ್ಲರು ಹುಳಿಯಾರು ಸಮೀಪದ ಬಸವನಗುಡಿಯ ಚೆಕ್ ಪೋಸ್ಟಿನಲ್ಲಿ ಸಿಕ್ಕಿಬಿದ್ದಿದ್ದು, ಸದ್ಯ ಇಲ್ಲಿನ ಬಸ್ ನಿಲ್ದಾಣಕ್ಕೆ ಇರಿಸಲಾಗಿದೆ.
ಇನ್ನು ಸಿಕ್ಕಿಬಿದ್ದ ಕಾರ್ಮಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಸೀಕೆರೆ, ಜಾವಗಲ್ ನಲ್ಲಿ ನಾಲಾ ಕಾಮಗಾರಿಯ ಕೆಲಸಕ್ಕೆ ಆಗಮಿಸಿದ್ದು,ಕಳೆದ ೪೦ ದಿನಗಳಿಂದಲೂ ಊರಿಗೆ ತೆರಳಲು ಪ್ರಯತ್ನಿಸಿದ್ದೆವು.ಆದರೆ ಪಾಸ್ ದೊರೆಯದೆ ಅಲ್ಲೇ ಉಳಿದ್ದಿದ್ದೇವು.ಇದಾದ ಬಳಿಕ ಕಡೆಯ ಪ್ರಯತ್ನವಾಗಿ ಕೆಎಸ್‌ಆರ್‌ಟಿಸಿ ಬಸ್ ಮುಖಾಂತರ ಹಣ ಪಾವತಿಸಿ ಜಾವಗಲ್ ನಿಂದ ಹುಳಿಯಾರಿಗೆ ಬಂದಿರುವುದಾಗಿ ಹೇಳಿದ್ದಾರೆ.
ಅಲ್ಲದೆ, ಜಾವಗಲ್‌ನಲ್ಲಿ ಹಿರಿಯೂರಿಗೆ ತೆರಳಿದರೆ ಅಲ್ಲಿಂದ ಬಸ್ ಮುಖಾಂತರ ಜಾರ್ಖಂಡ್‌ಗೆ ತಲುಪಬಹುದು ಎಂದು ಯಾರೋ ತಿಳಿಸಿದ ಪರಿಣಾಮ ನಾವುಗಳು ಬಸ್ಸಿನಲ್ಲಿ ಇಲ್ಲಿಗೆ ಆಗಮಿಸಿರೋದಾಗಿ ಮಾಹಿತಿ ನೀಡಿದ್ದಾರೆ.
ಇನ್ನು ಈ ೨೯ ಮಂದಿ ಹುಳಿಯಾರಿನ ಬಸ್ ನಿಲ್ದಾಣದಲ್ಲಿದ್ದು,ಹುಳಿಯಾರು ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದು, ಅವರುಗಳನ್ನು ಅವರವರ ಸ್ಥಳಕ್ಕೆ ಕಳುಹಿಸಲು ಮುಂದಾಗಿದ್ದಾರೆ.

ಶ್ರೀಮAತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಹುಳಿಯಾರು(ತುಮಕೂರು)

Please follow and like us:

Related posts

Leave a Comment