ಜನಹಿತ ವೇದಿಕೆಯಿಂದ ಆಹಾರ ಕಿಟ್ ವಿತರಣೆ

ಸಿರವಾರ(ರಾಯಚೂರು): ಸಿರವಾರ ಪಟ್ಟಣದ ವಿದ್ಯಾನಗರ ಕಾಲೋನಿಯಲ್ಲಿ ಜನಹಿತ ವೇದಿಕೆಯಿಂದ ಕೂಲಿ ಕಾರ್ಮಿಕರಿಗೆ ತಹಶೀಲ್ದಾರ್ ಕೆ. ಶೃತಿ ಅವರ ಮೂಲಕ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ದತ್ತಾತ್ರೇಯ ಕಾರ್ನಡ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಆಯುಷ್ಯ ಆರೋಗ್ಯ ವೈದ್ಯಾಧಿಕಾರಿ ಸುನೀಲ್ ಸರೋದೆ,ಸಿಡಿಪಿಐ ಮುದುಕಪ್ಪ, ಎಂ.ಆರ್.ಎಚ್.ಎಸ್. ಜಿಲ್ಲಾ ಅಧ್ಯಕ್ಷ ಅಬ್ರಹಾಂ ಹೊನ್ನಟಿಗಿ,ಸೇರಿದಂತೆ ಪಟ್ಟಣದ ಯುವಕರು, ಹಿರಿಯರು ಇತರರು ಉಪಸ್ಥಿತರಿದ್ದರು
ಇನ್ನು ತಹಶೀಲ್ದಾರ್ ಕೆ.ಶೃತಿ ಮಾತನಾಡಿ ಕೊರೊನಾ ವೈರಸ್ ದೇಶಾದ್ಯಂತ ವೇಗವಾಗಿ ಹರಡುತ್ತಿದ್ದು ಜನರನ್ನು ತಲ್ಲಣಗೊಳಿಸಿದೆ.
ಇಂತಹ ಪರಿಸ್ಥಿತಿಯಲ್ಲಿ ಬಡ ಜನರಿಗೆ ದುಡಿಯಲು ಕೆಲಸವಿಲ್ಲದೆ,ಒಪತ್ತಿನ ಗಂಜಿಗೂ ಕಷ್ಟ ಪಡುವಂತಾಗಿದೆ.ದುಡಿಯುವ ಕೈಗಳಿಗೆ ಕೊರೊನಾ ಕಟ್ಟಿ ಹಾಕಿದೆ.ಹೀಗಾಗಿ ಇಂತಹವರ ಕಷ್ಟ ಮನಗೊಂಡು ಜನಹಿತ ವೇದಿಕೆಯಿಂದ ಆಹಾರ ಕಿಟ್ ವಿತರಣೆ ಮಾಡಿದ್ದು,ಹೆಮ್ಮೆಯ ಸಂಗತಿ ಎಂದರು.

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ(ರಾಯಚೂರು)

Please follow and like us:

Related posts

Leave a Comment