ಮಳವಳ್ಳಿಯಲ್ಲಿ ಕೊರೊನಾ.. ನಂಜನಗೂಡಿನಲ್ಲಿ ನಡುಕ..

ನಂಜನಗೂಡು(ಮೈಸೂರು): ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೆ ಡೆಡ್ಲಿ ಕೊರೊನಾ ಮತ್ತೆ ಆತಂಕ ಸೃಷ್ಟಿಸಿದ್ದು,ಇದರಿಂದ ತಾಲೂಕು ಮತ್ತು ಜಿಲ್ಲಾ ಆಡಳಿತ ಹೈ ಅಲರ್ಟ್ ಆಗಿದೆ.
ಅಂದ ಹಾಗೆ ಮಳವಳ್ಳಿ ಪಾಸಿಟಿವ್ ಪ್ರಕರಣದ ನಂಟು ನಂಜನಗೂಡಿನಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ತಾಲೂಕಿನ ಎಳವರಹುಂಡಿ ಗ್ರಾಮ ಸೀಲ್ ಡೌನ್ ಆಗಿದೆ.
ಸದ್ಯ ಮಳವಳ್ಳಿಯ ಪಾಸಿಟಿವ್ ಪ್ರಕರಣದ ಸರ್ಕಾರಿ ಅಧಿಕಾರಿ ಸಂಬAಧಿಕರ ಮದುವೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಹೆಳವರಹುಂಡಿ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿ ಕೊರೊನಾ ಹರಡದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಿದೆ.
ಇನ್ನು ಮೈಸೂರು ಡಿಸಿ ಆದೇಶದ ಮೇರೆಗೆ ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್,ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಾಹಕ ಅಧಿಕಾರಿಗಳ ತಂಡ ಎಳವರ ಹುಂಡಿ ಗ್ರಾಮದಲ್ಲಿ ಮೊಕ್ಕಾಂ ಹೂಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ
ಇತ್ತೀಚಿನ ಮೂರು ದಿನಗಳ ಹಿಂದೆ ಎಳವರಹುಂಡಿ ಗ್ರಾಮದಲ್ಲಿ ವಿವಾಹ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ವಿವಾಹ ಕಾರ್ಯಕ್ರಮಕ್ಕೆ ಮಳವಳ್ಳಿ ಪಾಸಿಟಿವ್ ಪ್ರಕರಣದ ಸರ್ಕಾರಿ ಅಧಿಕಾರಿ ಆಗಮಿಸಿದ ಹಿನ್ನೆಲೆಯಲ್ಲಿ ಇದೀಗ ಡಿಸಿ ಆದೇಶದ ಮೇರೆಗೆ ಎಳವರಹುಂಡಿ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.
ಇದಲ್ಲದೆ, ನಂಜನಗೂಡು ತಾಲೂಕಿನ ಅಂಜನಾಪುರ ಮತ್ತು ಹೆಡಿಯಾಲ ಭಾಗಗಳಲ್ಲೂ ಕೂಡ ಮಳವಳ್ಳಿ ಪಾಸಿಟಿವ್ ಪ್ರಕರಣದ ಸರ್ಕಾರಿ ಅಧಿಕಾರಿಯ ಸಂಬAಧಿಕರು ತೆರಳಿದ್ದರು ಎಂಬ ಮಾಹಿತಿಯ ಆಧಾರದ ಮೇಲೆ ಈಗಾಗಲೇ ಅಂಜನಾಪುರ ಮತ್ತು ಮಡುವಿನ ಹಳ್ಳಿ,ಹೆಡಿಯಾಲ ಗ್ರಾಮಗಳಿಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಒಟ್ಟಾರೆ ಮಳವಳ್ಳಿಯ ಕೊರೋನಾ ಪಾಸಿಟಿವ್ ಸರ್ಕಾರಿ ಅಧಿಕಾರಿಯ ಭೇಟಿ ಹಿನ್ನೆಲೆಯಲ್ಲಿ ಮತ್ತೆ ನಂಜನಗೂಡಿನಲ್ಲಿ ಆತಂಕ ಸೃಷ್ಟಿಯಾಗಿದೆ.
ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Please follow and like us:

Related posts

Leave a Comment