ಶಿರಾದಲ್ಲಿ ಮಾಸ್ಕ್ ಇಲ್ಲದೇ ಓಡಾಡಿದ್ರೆ ದಂಡ ತೆರಬೇಕಾಗುತ್ತದೆ ಹುಷಾರ್..

ಶಿರಾ(ತುಮಕೂರು): ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಲ್ಕನೇ ಬಾರಿ ಲಾಕ್‌ಡೌನ್ ಮುಂದುವರಿಸಿದೆ. ಆದರೆ ಇಷ್ಟಾದರೂ ಸಾರ್ವಜನಿಕರು ಮಾತ್ರ ಮಾಸ್ಕ್ ಇಲ್ಲದೇ ಎಲ್ಲೆಂದರಲ್ಲಿ ಓಡಾಟ ನಿಲ್ಲಿಸಿಲ್ಲ.. ಹೀಗಾಗಿಯೇ ಶಿರಾ ನಗರದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಕೆಲಸ ಆರಂಭಗೊ0ಡಿದೆ.
ಅ0ದ ಹಾಗೇ ನಗರದಲ್ಲಿ ಬಹುತೇಕ ಜನರು ಮಾಸ್ಕ್ ಇಲ್ಲದೆ ರಸ್ತೆಗಿಳಿದಿದ್ದು,ಸದ್ಯ ಮಾಸ್ಕ್ ಹಾಕದ ಬೈಕ್ ಸವಾರರು, ಅಂಗಡಿಗಳಲ್ಲಿ ಮಾಲೀಕರು ಹಾಗೂ ವ್ಯಾಪಾರಸ್ಥರಿಗೆ ಇಂತಹವರಿಗೆ ಅಧಿಕಾರಿಗಳು ಸರಿಯಾಗಿ ಬಿಸಿ ಮುಟ್ಟಿಸುವ ಕೆಲಸಕ್ಕೆ ಕೈಹಾಕಿದ್ದಾರೆ.
ಇನ್ನು ನಗರದ ವಿವಿಧ ಭಾಗಗಳಲ್ಲಿ ಮಾಸ್ಕ್ ಇಲ್ಲದೆ ವ್ಯಾಪಾರ ಮಾಡುವರು ಮತ್ತು ಬೈಕ್‌ನಲ್ಲಿ ಓಡಾಡುವವರಿಗೆ ತಹಶೀಲ್ದಾರ್
ನಾಹಿದ ಜಮ್ ಜಮ್ ಹಾಗೂ ನಗರ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಭಾರತಿ ಜಂಟಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಹಾಕದವರಿಗೆ ದಂಡ ಹಾಕಿದ್ದಾರೆ.
ಇದಲ್ಲದೆ,ಆರೆಂಜ್ ಝೋನ್ ಪ್ರದೇಶವಾದರೂ ಮುಂಜಾಗ್ರತೆಯಿAದ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ತಾಲ್ಲೂಕು ಅಡಳಿತ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಇಲ್ಲದೆ ಓಡಾಡುವ ಜನರಿಗೆ ಮತ್ತು ವಾಹನ ಸವಾರರಿಗೆ ಮುಲಾಜಿಲ್ಲದೆ ದಂಡ ವಿಧಿಸುತ್ತಿದ್ದಾರೆ.
ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment