ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ..

ತಿಪಟೂರು(ತುಮಕೂರು): ಕೊಬ್ಬರಿಗೆ ಕನಿಷ್ಠ ಇಪ್ಪತ್ತು ಸಾವಿರ ರೂ.ಗಳ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮಾಜಿ ಸಂಸದ ಮುದ್ದಹನುಮೆಗೌಡ ಸರಕಾರಕ್ಕೆ ಆಗ್ರಹಿಸಿದ್ದಾರೆ.
ನಗರದ ಎ.ಪಿ.ಎಂ.ಸಿಯ ಆವರಣದಲ್ಲಿ ಇರುವ ರೈತ ಭವನದಲ್ಲಿ ಮಾತನಾಡಿದ ಅವರು.ಸರಕಾರವು ಈಗಾಗಲೇ ಐದು ನೂರು ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದ್ದು,ಕೊಬ್ಬರಿ ಬೆಲೆ ಒಂಬತ್ತು ಸಾವಿರಕ್ಕೆ ಇಳಿದಿದೆ.ಈ ಕೂಡಲೇ ಸರಕಾರ ಮಧ್ಯಪ್ರವೇಶಿಸಿ ಇಪ್ಪತ್ತು ಸಾವಿರ ರೂ.ಗಳನ್ನು ನಿಗದಿ ಪಡಿಸಿ ರೈತರ ಹಿತಕಾಯಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ತಿಪಟೂರು ನಗರಕ್ಕೆ ಭೇಟಿ ನೀಡಿದ್ದ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಕೊಟ್ಟ ಮಾತಿನಂತೆ ತಿಪಟೂರಿನ ಕೊಬ್ಬರಿಗೆ ಸುಮಾರು ಐದು ಸಾವಿರ ರೂ. ಬೆಂಬಲ ಬೆಲೆ ನೀಡುತ್ತವೆ ಎಂದು ಭರವಸೆ ನೀಡಿದ್ದು,ಅದರಂತೆ ನಡೆದು ಕೊಳ್ಳಬೇಕು ಎಂದರು.
ಇದಲ್ಲದೆ,ಸರ್ಕಾರ ಇತ್ತೀಚಿಗೆ ಹೊರಡಿಸಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಿ ಸರಕಾರ ಮಾರುಕಟ್ಟೆಗಳನ್ನು ಉಳಿಸುವ ಮೂಲಕ ರೈತನನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿ.ಬಿ ಶಶಿಧರ್, ಮಾಜಿ ತಾ.ಪಂ ಅಧ್ಯಕ್ಷ ಪರಮಶಿವಯ್ಯ, ಮಾ.ಜಿ.ಪಂ ಸದಸ್ಯ ತ್ರಿಯಂಭಕ, ಬೆಲೆ ಕವಲು ಸಮಿತಿ ಅಧ್ಯಕ್ಷ ಶ್ರೀಕಾಂತ್, ರಾಯಸಂದ್ರ ರವಿ ಮತ್ತಿತರರು ಹಾಜರಿದ್ದರು.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Please follow and like us:

Related posts

Leave a Comment