ಮೃತ ಮಹಿಳೆ ಕುಟುಂಬಕ್ಕೆ ಸರ್ಕಾರದಿಂದ ಸಹಾಯ..

ಆನೇಕಲ್(ಬೆಂ.ನಗರ): ಬೆಂಗಳೂರಿನ ಬೊಮ್ಮನಹಳ್ಳಿಗೆ ಸಮೀಪದ ಬೇಗೂರಿನಲ್ಲಿ ಮರ ಬಿದ್ದು ಸಾವು ಕಂಡ ಮಹಿಳೆ ಕುಟುಂಬಸ್ಥರಿಗೆ ಶಾಸಕ ಎಂ.ಕೃಷ್ಣಪ್ಪ ಸಾಂತ್ವನ ಹೇಳಿದ್ದಾರೆ.
ಅಂದ ಹಾಗೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಹೇಮಾ(೪೫)ಮೇಲೆ ಮರವೊಂದು ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದ ಘಟನೆ ಬೊಮ್ಮನಹಳ್ಳಿ ಸಮೀಪದ ಬೇಗೂರಿನಲ್ಲಿ ನಡೆದಿತ್ತು.
ಅಂದ ಹಾಗೇ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ತೆರಳುವ ಸಂಧರ್ಭದಲ್ಲಿ ಈ ಘಟನೆ ನಡೆದಿತ್ತು.ಮರ ಹೇಮಾ ಅವರ ತಲೆಯ ಮೇಲೆಯೇ ಬಿದ್ದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಇದರ ಹಿನ್ನೆಲೆಯಲ್ಲಿ ಸೆಂಟ್ ಜಾನ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಹಿಳೆ ಹೇಮಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಎಂ.ಕೃಷ್ಣಪ್ಪ, ಸಿಎಂ ಜೊತೆ ಮಾತನಾಡಿ ಸರ್ಕಾರದಿಂದ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದರು.

ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment