ಪೊಲೀಸ್ ಪೇದೆಗೆ ಕೊರೊನಾ.. ದೇವದುರ್ಗ ಪೊಲೀಸ್ ಠಾಣೆ ಸೀಲ್‌ಡೌನ್..

ದೇವದುರ್ಗ(ರಾಯಚೂರು): ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೇಬಲ್‌ವೊಬ್ಬರಿಗೆ ಕೋವಿಡ್-೧೯ ಸೋಂಕು ಧೃಡಪಟ್ಟಿರುವುದರಿಂದ ಅವರನ್ನು ರಾಯಚೂರು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ.
ಇದರ ಹಿನ್ನೆಲೆಯಲ್ಲಿ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿರುವವರಿಗಾಗಿ ಮಾಹಿತಿ ಪಡೆಯಲಾಗುತ್ತಿದೆ.
ಇನ್ನು ಪೊಲೀಸ್ ಠಾಣೆ ಕರ್ತವ್ಯದಲ್ಲಿರುವ ೨೫ ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನಗೆ ಕಳಿಸಲಾಗುವುದು ಎಂದು ಡಿ.ವೈ.ಎಸ್.ಪಿ
ಎಸ್.ಎಸ್.ಹುಲ್ಲುರು ಹೇಳಿದ್ದಾರೆ.
ಈಗಾಗಲೇ ದೇವದುರ್ಗ ಪೊಲೀಸ್ ಠಾಣೆ ಮತ್ತು ಸುತ್ತಲೂ ಸ್ಯಾನಿಟೈಸರ್ ಮಾಡಿಸಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಠಾಣೆಯ ಪಕ್ಕದಲ್ಲಿರುವ ಹಾಗೂ ಸುತ್ತ ಮುತ್ತಲಿನ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ ಮಾಡಲಾಗಿದೆ.ಸಾರ್ವಜನಿಕರಿಂದ ಯಾವುದೇ ದೂರುಗಳು ಸಲ್ಲಿಸುವುದಾದರೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕವಾಗಿ ೭ ದಿನಗಳವರೆಗೆ ಠಾಣೆಯಲ್ಲಿಯೇ ದೂರುಗಳನ್ನು ನೀಡಲು ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment