ಲಾಕ್ ಡೌನ್ ನಿಂದ ನಡೆಯಿತು ಅಚಾತುರ್ಯ..

ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ ಒಂದು ವಾರದ ಲಾಕ್ ಡೌನ್ ಮಾಡಿದ್ದು ಜನರಿಗೆ ಉಪಯೋಗವಾಗದಿದ್ದರು ಕಳ್ಳ-ಕಾಕರೀಗೆ ಮಾತ್ರ ಉಪಯೋಗವಾಗಿದೆ. ಲಾಕ್ ಡೌನ್ ಸಮಯವನ್ನೇ ಅಸ್ತ್ರವಾಗಿಟ್ಟುಕೊಂಡು ಮನೆಯ ಮುಂದೆ ನಿಲ್ಲಿಸಿದಂತಹ ಬೈಕ್ ಅನ್ನು ಕದ್ದು ಪರಾರಿಯಾಗಿರುವ ಘಟನೆ ತಿಗಳರ ಪಾಳ್ಯದ ಮುನೇಶ್ವರ ನಗರದಲ್ಲಿ ನಡೆದಿದೆ. ಬೈಕ್ ನ ಮಾಲೀಕ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕೆಲಸ ಮುಗಿಸಿ ಮನೆಗೆ ಬಂದು ಬೈಕ್ ಮನೆಯ ಮುಂದೆ ನಿಲ್ಲಿಸಿದ್ದರು.ರಾತ್ರೋರಾತ್ರಿ ಕಳ್ಳ ಕೈಚಳಕ ತೋರಿಸಿದ್ದು ಮನೆಯ ಮುಂದೆ ಇದ್ದಂತಹ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯಗಳೂ ಸೆರೆಯಾಗಿದೆ.ಇದರ ಆದಾರದ ಮೇಲೆ ಬ್ಯಾಡರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

Please follow and like us:

Related posts

Leave a Comment