ರಾಯಚೂರು ಜಿಲ್ಲೆ ಸಂಡೇ ಸಂಪೂರ್ಣ ಸ್ತಬ್ಧ…

ರಾಯಚೂರು: ರಾಜ್ಯಸರ್ಕಾರ ಘೋಷಿಸಿದ್ದ ಲಾಕ್ ಡೌನ್ ಅನ್ವಯ ರಾಯಚೂರಿನಲ್ಲಿ ನಿನ್ನೆಯಿಂದ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದೆ.ಇನ್ನೂ ಜಿಲ್ಲೆಯಲ್ಲಿರುವ ಮಾರುಕಟ್ಟೆಯನ್ನು ವಿಸ್ತಾರ ಪ್ರದೇಶಗಳಿಗೆ ಸ್ಥಳಾಂತರಿಸಿ, ಜನರಿಗೆ ಸಂಡೇ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗುತ್ತದೆ, ಇನ್ನೂ ಹೊರ ಜಿಲ್ಲೆಗಳಿಂದ ಬಂದಂತಹವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕೆಂದು ಕೆಲ ಸದಸ್ಯರ ಜೊತೆ ಸಭೆ ಕೂಡ ನಡೆಸಿ ತಿರ್ಮಾನ ತೆಗೆದುಕೊಳ್ಳಲಾಗುವುದು, ಜೊತೆಗೆ ಈಗಾಗಲೇ ಹಲವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಇಬ್ಬರು ಸೋಂಕಿಗೆ ಮೃತಪಟ್ಟಿರುವುದು ದೃಡ ಪಟ್ಟಿದೆ..ಜಿಲ್ಲೆಯಲ್ಲಿ 6 ಕೊವಿಡ್ ಕೇರ್ ಸೆಂಟರ್ ಗಳನ್ನು ಮಾಡಲಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಹಾಗು ಐಎಲ್ಐ ಪ್ರಕರಣಗಳನ್ನು ಕೊವಿಡ್ ಕೇರ್ ಸೆಂಟರ್ ಗಳಿಗೆ ಕಳುಹಿಸಲಾಗುತ್ತಿದೆ. ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಸೇರಿದಂತೆ ಕೆಲ ಹೋಟೆಲ್ ಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಎಂದು ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಹೇಳಿಕೆ ನೀಡಿದ್ದಾರೆ

Please follow and like us:

Related posts

Leave a Comment