ಕೊನೆಗೂ ಸಿಕ್ಕಿ ಬಿದ್ದ ಭ್ರಷ್ಟರು…!

ರಾಯಚೂರು:ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಹಾಡಗಲೇ ಪಡಿತರ ಅಕ್ಕಿಯನ್ನು ಕದ್ದು ಸಾಗಾಟ ಮಾಡುತ್ತಿದ್ದ, ವಾಹನವನ್ನು ಆಹಾರ ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಯಾದ ಶಿರಸ್ತೇದಾರ ಬಸವಂತ ಸಿಂಗ್ ಹಾಗೂ ಸಿಬ್ಬಂದಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ವಾಹನವನ್ನು ಸೀಸ್ ಮಾಡಿದ್ದಾರೆ.ಸುಮಾರು 50ಕೆ.ಜಿಯ 24 ಅಕ್ಕಿಯ ಮೂಟೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ವಾಹನ ಸವಾರ ಅಶೋಕ್ ನಂಬರ್ ಪ್ಲೇಟ್ ಇಲ್ಲದೇ ಗಾಡಿಯನ್ನು ಚಲಾಯಿಸುತ್ತಿದ್ದ, ಮನೆ ಮನೆಗೆ ತೆರಳಿ ಪಡಿತರ ಅಕ್ಕಿಯನ್ನು ಸಂಗ್ರಹಿಸುತ್ತಿದ್ದು, ನಾಗರಹಾಳ ಗ್ರಾಮದಿಂದ ಕುಷ್ಟಗಿ ಪಟ್ಟಣಕ್ಕೆ ಅಕ್ಕಿಯನ್ನು ರವಾನೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

Please follow and like us:

Related posts

Leave a Comment