ಸರ್ಕಾರಿ ಶಾಲೆಯನ್ನು ಕೊಂಡಾಡಿದ ಶಿಕ್ಷಣ ಸಚಿವ ಸುರೇಶ ಕುಮಾರ್…!

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಕೆಂಪಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಶಿಕ್ಷಣ ಸಚಿವರು ಭೇಟಿ ನೀಡಿ ಶಾಲೆಯ ಶಿಕ್ಷಕರ ಕಾರ್ಯಕ್ಕೆ ಪ್ರಶಂಸನೀಯ ವ್ಯಕ್ತ ಪಡಿಸಿದರು. ದೇಶದ ಮೂಲೆ ಮೂಲೆಗಳಲ್ಲಿ ಯಾವುದೇ ಶಾಲೆಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿಲ್ಲ, ಆದರೆ ಕುಗ್ರಾಮವಾದ ಕೆಂಪಯ್ಯನ ದೊಡ್ಡಿ ಗ್ರಾಮದ ಶಿಕ್ಷಕರು ವೃತ್ತಿ ಗೌರವದಿಂದ ತಮ್ಮ ಅಮೂಲ್ಯ ಸಮಯವನ್ನು ಹರಣ ಮಾಡದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಮನೆ ಬಾಗಿಲಿಗೆ ಹೋಗಿ ಬೋಧನೆ ಮತ್ತು ಕಲಿಕ ಚಟುವಟಿಕೆಗಳನ್ನು ಹೇಳಿಕೊಡುವ ಮೂಲಕ ಆದರ್ಶ ಶಿಕ್ಷಕರಾಗಿದ್ದಾರೆ.ಕೊರೋನ ಸೊಂಕು ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಸಕ ವರ್ಷದ ಸಾಲಿನ ತರಗತಿಗಳ ಪ್ರವಚನಗಳು ನಡೆಯುತ್ತಿಲ್ಲ ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಪ್ರಸ್ತುತ ಕೆಂಪಯ್ಯನ ದೊಡ್ಡಿ ಗ್ರಾಮದ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರ ಕರ್ತವ್ಯ ನಿಷ್ಠೆ ಹಾಗೂ ವೃತ್ತಿ ಪರತೆಯನ್ನ ನಾವು ಗೌರವಿಸಬೇಕು ,ಇಂತಹ ಆದರ್ಶನೀಯ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ.ದೇಶದ ಜನತೆಯ ಮಕ್ಕಳ ಭವಿಷ್ಯ ತೂಗು ಉಯ್ಯಾಲೆಯಂತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ದುಡ್ಡು ಮಾಡುವುದಕ್ಕಾಗಿ ಆನ್ ಲೈನ್ ಶಿಕ್ಷಣವನ್ನು ನೀಡುತ್ತಿದ್ದು ಇದರ ಪೋಷಕರು ಹೊರೆಯನ್ನು ಹೊರುವಂತಾಗಿದೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ವಿಷಾದ ವ್ಯಕ್ತಪಡಿಸಿದರು.
ಎ.ಎನ್ ಲೋಕೇಶ್.ಎಕ್ಸ್ ಪ್ರೆಸ್ಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment