ರೈತ ಕಾರ್ಮಿಕರ ಹಕ್ಕು ಉತ್ತಾಯಿಸಿ ಪ್ರತಿಭಟನೆ…!

ಹುಬ್ಬಳ್ಳಿ: ವಿವಿಧ ರೈತ ಕಾರ್ಮಿಕರ ಹಕ್ಕು ಒತ್ತಾಯ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ ಸಭಾ ಧಾರವಾಡ ಜಿಲ್ಲಾ ಸಮಿತಿಗಳು ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಮಿಕ ವಿರೋಧಿಯಾಗಿರುವ ಹಾಗೂ ಮಾಲೀಕರ ಪರವಾಗಿಯಿರುವ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಕೈಬಿಡಬೇಕು, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆ ವಾಪಾಸ್ಸಾಗಲಿ, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಕೈಬಿಡಬೇಕು, ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಸುಗ್ರಿವಾಜ್ಞ ಕೈಬಿಡಬೇಕು, ತುಟ್ಟಿ ಭತ್ಯೆ ಒಂದು ವರ್ಷ ಮುಂದೂಡುವ ಆದೇಶ ವಾಪಾಸ್ ಪಡೆಯಬೇಕು, ಆದಾಯ ತೆರಿಗೆ ವ್ಯಾಪ್ತಿಯ ಬರದ ಎಲ್ಲಾ ಕುಟುಂಬಗಳಿಗೆ ಆರು ತಿಂಗಳವರೆಗೆ 7500 ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿ ತಹಶಿಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿಐಪಿಯು ನ ಮಹೇಶ ಪತ್ತಾರ, ಬಿ, ಎನ್, ಪೂಜಾರಿ, ಎನ್, ಎ,ಖಾಜಿ, ದೇವಾನಂದ ಜಗಪೂರ, ಬಿ, ಎಸ್, ಸೊಪ್ಪಿನ, ಶಿವಪ್ಪ ಲಮಾಣಿ, ಬಾಬಾಜಾನ ಮುದೋಳ ಸೇರಿದಂತೆ ಮುಂತಾದವರು ಉಪಸ್ಥೀತರಿದ್ದರು.

Please follow and like us:

Related posts

Leave a Comment