ಸತ್ಯಕ್ಕೆ ವಿರುದ್ದದ ದೂರಿಗೆ ಗುಡುಗಿದ ಡಿ.ಯಮನೂರು..!

ಸಿರವಾರ :ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿವಮ್ಮನ ಮೇಲಿನ ದೂರು ಸತ್ಯಕ್ಕೆ ವಿರುದ್ಧವಾದದ್ದು, ಕಿಡಿಗೇಡಿಗಳು ಈ ರೀತಿ ಆರೋಪ ಮಾಡುತ್ತಿರುವುದು ಸರಿಯಿಲ್ಲ ಎಂದು ವಿವಿಧ ಸಂಘಟನೆಗಳು ತನಿಖೆ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಿರವಾರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು 70ರಿಂದ 80 ಗರ್ಭೀಣೀಯರಿಗೆ ಕೇಂದ್ರದಲ್ಲಿ ಹೆರಿಗೆಯಾಗುತ್ತವೆ. ಇಲ್ಲಿ ನರ್ಸ್ ಗಳ ಪಾತ್ರ ಪ್ರಮುಖವಾದದ್ದು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಇದ್ದರು ನರ್ಸ್ ಗಳು ಹಗಲು ಇರುಳು ಎನ್ನದೇ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದರಿಂದ ಎಲ್ಲಾ ಸಾರ್ವಜನಿಕರು ಹಾಗೂ ಸಂಘಟನೆಗಳ ಮುಖಂಡರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಯಾರೋ ಕಿಡಿಗೇಡಿಗಳು ಈ ರೀತಿ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಮ್ಮನ ಮೇಲಿನ ಆರೋಪ ಸತ್ಯಕ್ಕೆ ವಿರುದ್ಧವಾದದ್ದು, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸ್ಟಾಪ್ ನರ್ಸ್ ಗಳಿಂದ ಹೆರಿಗೆ ಮಾಡಿಸಿಕೊಂಡಂತಹ ಗರ್ಭೀಣಿ ಸ್ತ್ರಿಯರ ಮನೆಯವರು ಮಾನವೀಯತೆ ದೃಷ್ಟಿಯಿಂದ ಕೊಟ್ಟಿರುವ ಹಣವನ್ನು ಕಿಡಿಗೇಡಿಗಳು ನರ್ಸ್ ಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಡೀಯೋವನ್ನು ಮಾಡಿದ್ದು, ಕುತಂತ್ರ ಬುದ್ಧಿಯಿಂದ ಇಂತಹ ಚಟುವಟಿಕೆ ಕಾನೂನುಬಾಹಿರ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿರುವವರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಸರ್ಕಾರದಲ್ಲಿ ರಾಜಕೀಯ ವ್ಯಕ್ತಿಗಳು ಕೋಟಿಗಟ್ಟಲೆ ಹಣ ಗುಳುಂ ಮಾಡುತ್ತಿದ್ದಾರೆ, ಇದನ್ನು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡು ಸಮಾಜದ ಒಳಿತಿಗೆ, ಸಮಾಜದ ಉನ್ನತಿಗೆ ಶ್ರಮಿಸಬೇಕು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡುವುದು ಎಷ್ಟು ಸರಿ ?ಎಂದು ಡಿ.ಯಮನೂರ ಸಿರವಾರ ಗುಡುಗಿದ್ದಾರೆ.

ವರದಿ: ಸುಲ್ತಾನ್ ಬಾಬು ಎಕ್ಸ್ ಪ್ರೆಸ್ ಟಿವಿ ರಾಯಚೂರು

Please follow and like us:

Related posts

Leave a Comment