ಕೊರೋನಾ ಸಮಯದಲ್ಲಿ ನಡೆಯುತ್ತಿದೆ ಹೈಟೆಕ್ ಇಸ್ಪೀಟ್ ಧಂದೆ..!

ಕೋಲಾರ: ಕೊರೊನಾ ಸಮಯದಲ್ಲಿ ಐದಾರು ತಿಂಗಳುಗಳಿಂದ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಂದರ್ ಬಾಹರ್ ಜೂಜು ನಿರಾಂತಕವಾಗಿ ನಡೆಯುತ್ತಿದ್ದು,ಇದರ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪುಲ್ ವೈರಲ್ ಆಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ, ಆವಲದೊಡ್ಡಿ, ಪುಂಗುನೂರು ಕ್ರಾಸ್ ನಲ್ಲಿ ಪ್ರತಿನಿತ್ಯ ದೊಡ್ಡ ಮಟ್ಟದ ಇಸ್ಪೀಟು ದಂಧೆ ನಡೆಯುತ್ತಿದೆ. ನೂರಾರು ಮಂದಿ ಒಂದೆಡೆ ಸೇರಿ ಎರಡು ಪಾಳಿಗಳಲ್ಲಿ ಜೂಜು ಕೇಂದ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ನಿತ್ಯವೂ 50 ಲಕ್ಷ ರೂ.ಗಳಿಂದ 1 ಕೋಟಿ ವರೆಗೂ ವಹಿವಾಟು ನಡೆಯುತ್ತಿದೆ. ಲಕ್ಷ್ಮೀಪುರದ ಕನ್ನಯ್ಯ, ನಾಗರಾಜ್ ವ್ಯಕ್ತಿಗಳಿಬ್ಬರು ಆವಲದೊಡ್ಡಿ ಎಂಬ ಗ್ರಾಮದಲ್ಲಿ ಅನಧಿಕೃತವಾಗಿ ಈ ಜೂಜು ಕೇಂದ್ರವನ್ನು ನಡೆಸುತ್ತಿದ್ದು, ಇದು ಐದಾರು ತಿಂಗಳುಗಳಿಂದ ಲಾಕ್ಡೌನ್, ಸೀಲ್ಡೌನ್ ಹಂಗಿಲ್ಲದೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೂ ನಡೆಯುತ್ತಿದೆ. ಪ್ರತಿ ಕೇಂದ್ರದಲ್ಲಿಯೂ ಕೋಲಾರ ಜಿಲ್ಲೆ, ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶದ ಮದನಪಲ್ಲಿ ಇತರೆರೆಡೆಗಳಿಂದ ನೂರಾರು ಮಂದಿ ಇಸ್ಪೀಟು ಆಡಲು ಬರುತ್ತಿದ್ದು, ಜೂಜಾಟವಾಡಲೂ ಮೊಬೈಲ್ ತರಬಾರದೆಂಬ ಕರಾರು ಮಾಡಲಾಗುತ್ತದೆಯಂತೆ ಒಂದು ಪಕ್ಷ ಮೊಬೈಲ್ಗಳನ್ನು ತಂದರೂ ಕಿತ್ತಿಟ್ಟುಕೊಳ್ಳಲಾಗುತ್ತದೆ. ಜೂಜು ಕೇಂದ್ರಗಳ ಬಳಿ ಉಂಟಾಗುವ ಘರ್ಷಣೆ ಹಾಗೂ ಜಗಳಗಳನ್ನು ನಿಯಂತ್ರಿಸಲು ಸ್ವಯಂ ರಕ್ಷಣಾ ಪಡೆ ಸದಸ್ಯರಿದ್ದು, ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ದೂರುಗಳು ದಾಖಲಾಗದಂತೆ ಎಚ್ಚರವಹಿಸಲಾಗುತ್ತಿದೆ. ಜೂಜು ಕೇಂದ್ರಗಳಲ್ಲಿಯೇ ಆಟವಾಡಲೂ ಜನರಿಗೆ 10 ರೂಪಾಯಿಗಿಂತ ಹೆಚ್ಚು ಬಡ್ಡಿಗೆ ಹಣ ನೀಡುವ ವ್ಯವಸ್ಥೆ ಕೂಡ ಇದೆಯಂತೆ.ಇದೀಗ ಜೂಜು ನಡೆಸುವ ಪಾಲುದಾರರ ಮಧ್ಯೆ ತಕರಾರು ಏರ್ಪಟ್ಟಿದ್ದು, ಇದರಿಂದ ಲಕ್ಷ್ಮೀಪುರ ಹಾಗೂ ಆವಲದೊಡ್ಡಿಯಲ್ಲಿ ನಡೆಯುತ್ತಿರುವ ಜೂಜಾಟದ ವೀಡಿಯೋಗಳು ಫುಲ್ ವೈರಲ್ ಆದ್ರೂ ಪೋಲಿಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಗ್ರಾಮಸ್ಥರನ್ನು ಅನುಮಾನಕ್ಕೆ ದೂಡಿದಂತಾಗಿದೆ..

ವರದಿ: ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment