ಫಲಪುಷ್ಪ ಪ್ರದರ್ಶನಕ್ಕೂ ತಟ್ಟಿದ ಕೊರೊನಾ ಬಿಸಿ..!

ಬೆಂಗಳೂರು: ಆಗಸ್ಟ್ ತಿಂಗಳು ಬಂತದ್ರೆ ಸಾಕು ಎಲ್ಲರಿಗೂ ಸಂತಸ. ಯಾಕಂದ್ರೆ ಪ್ರತಿ ವರ್ಷ ಲಾಲ್ ಬಾಗ್ ನಲ್ಲಿ ಸಾವಿರಾರು ಬಗೆ ಬಗೆಯ ಹೂವುಗಳಿಂದ ವಿಭಿನ್ನ ರೀತಿಯಲ್ಲಿ ಲಾಲ್ ಬಾಗ್ ಅನ್ನು ಅಲಂಕಾರ ಮಾಡಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಇದನ್ನು ಕಣ್ತುಂಬಿ ಕೊಳ್ಳುವುದಕ್ಕೆ ಜನರು ತುದಿಗಾಲಲ್ಲಿ ನಿಂತು ಕಾಯುವುದು ಸುಳ್ಳಲ್ಲ. ಆದ್ರೆ ಈ ಬಾರಿ ಹೂವಿನ ಪ್ರಿಯರಿಗೆ ಬೇಸರದ ಸಂಗತಿಯನ್ನು ಲಾಲ್ ಬಾಗ್ ಇಲಾಖೆ ಹೊರಹಾಕಿದೆ. ಸ್ವಾತಂತ್ರೋತ್ಸವದ ಅಂಗವಾಗಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಕೊರೊನಾ ಭೀತಿಯಿಂದಾಗಿ ರದ್ದು ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರು ಅಧಿಕೃತವಾಗಿ ತಿಳಿಸಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಪ್ರದರ್ಶನ ರದ್ದು ಮಾಡುವುದೇ ಸೂಕ್ತ ಎಂಬ ಸಲಹೆಗಳು ಬಂದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಇಲಾಖೆ ಹೇಳಿದೆ. ಆಗಸ್ಟ್ ಮೊದಲ ವಾರದಲ್ಲಿ ಪ್ರದರ್ಶನ ಮಾಡಲಾಗುತ್ತಿತ್ತು. ಅದಕ್ಕೆ ಎರಡು ತಿಂಗಳ ಹಿಂದೆಯೇ ತಯಾರಿ ಕೆಲಸ ನಡೆಯತ್ತಿತ್ತು. ಫಲಪುಷ್ಪ ಪ್ರದರ್ಶನ ಆರಂಭವಾಗಿ 20 ವರ್ಷವಾಯ್ತು.ನಾನಾ ಕಾರಣದಿಂದಾ ಎರಡು ಬಾರಿ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ರಾಜ್ಯದಲ್ಲಿ ಕಳೆದ 8 ತಿಂಗಳಿಂದ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇರುವುದರಿಂದ 20 ವರ್ಷದ ಬಳಿಕ ಮೂರನೇ ಬಾರಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ರದ್ದು ಮಾಢಲಾಗಿದೆ ಎಂದು ಇಲಾಖೆ ತಿಳಿಸಿದೆ.

ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment