ತಿಪಟೂರಿನ ಕೋವಿಡ್ ಸೆಂಟರ್ ನಲ್ಲಿ ರೋಗಿಗಳಿಗೆ ಸೂಕ್ತ ಮೂಲಭೂತ ಸೌಕರ್ಯ್ಯವೇ ಇಲ್ವಂತೆ..!

ತಿಪಟೂರು: ಕೋವಿಡ್ ಕೇರ್ ಸೆಂಟರ್ನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸದೇ ರೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಕೊರೊನಾ ಸೋಂಕಿತರು ಆರೋಪಿಸಿದ್ದಾರೆ. ಕೊನೇಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 112 ಹಾಸಿಗೆಗಳೂ ಇರುವ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ್ದು, ಇದನ್ನು ನಿರ್ವಹಣೆ ಮಾಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಸೋಂಕಿತರು ದೂರಿದ್ದಾರೆ. ದಾಖಲೆಗೆ ಮಾತ್ರವೇ ಊಟದ ಪಟ್ಟಿ ಹಾಕಿದ್ದು ಒಂದು ದಿನವೂ ಮೊಟ್ಟೆ ನೀಡಿಲ್ಲ, ಅಲ್ಲದೆ ಶೌಚಾಲಯಗಳಿಗೆ ದ್ರವಣ ಯುಕ್ತ ನೀರನ್ನು ಹಾಕುತ್ತಿಲ್ಲ, ಜೊತೆಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡುತ್ತಿಲ್ಲ, ವೈದ್ಯರು ಸೋಂಕಿತರೊಂದಿಗೆ ವಿಶ್ವಾಸ ತುಂಬುವ ಮಾತುಗಳನ್ನಾಡುವುದನ್ನು ಬಿಟ್ಟು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದ್ದರೂ ಅಧಿಕಾರಿಗಳು ಯಾವುದೇ ಸೌಲಭ್ಯ ನೀಡದೆ ಹಣವನ್ನು ಲೂಟಿ ಮಾಡುವ ಯತ್ನದಲ್ಲಿದ್ದಾರೆ ಎಂದು ಸೋಂಕಿತ ಗಂಗಾಧರ್ ರವರು ದೂರಿದ್ದಾರೆ. ಆಸ್ಪತ್ರೆಯ ಈ ಅವ್ಯವಸ್ಥೆಯ ಬಗ್ಗೆ ವಿಡೀಯೋ ಮಾಡಿದ್ದು ಈ ವಿಡೀಯೋವನ್ನು ನೋಡಿಯಾದ್ರು ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಮಂಡಳಿ ಈ ಆಸ್ಪತ್ರೆಯ ಸುವ್ಯವಸ್ಥೆಯ ಬಗ್ಗೆ ಗಮನಹರಿಸಬೇಕು ಕೋವಿಡ್ ಪೆಶೇಂಟ್ ಗಳಿಗೆ ಸರಿಯಾದ ರೀತಿಯಲ್ಲಿ ಊಟ-ತಿಂಡಿಯ ವ್ಯವಸ್ಥೆ ಹಾಗೂ ಕೆಲ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ-ಸಿದ್ದೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment