ಕಳಪೆ ಕಾಮಗಾರಿ ವಿರುದ್ದ ಗರಂ ಆದ ‘ಕೋಡಿಹಳ್ಳಿ ಚಂದ್ರಶೇಖರ್’..!

ರಾಯಾಚೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿರುವ ಕೆ.ಬಿ.ಜೆ.ಎನ್.ಎಲ್ ನಲ್ಲಿ ಕೃಷ್ಣ ಭಾಗ್ಯ ಜಲನಿಗಮದ ವತಿಯಿಂದ ನಾರಾಯಣಪುರ ಬಲದಂರ್ಡೆ೫.ಕಿ.ಮೀ ಕಾಲುವೆಯ ಕಾಮಗಾರಿ ನಡೆಯುತ್ತಿದ್ದು,ಅದು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದ್ದಾಗಿದೆ ಎಂದು ಸರ್ಕಾರ ಹಾಗೂ ಗುತ್ತೆಗೆದಾರರ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ‌ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಗುಡುಗಿದ್ದಾರೆ.೯೬ಕಿ.ಮೀ ಕಾಲುವೆಯ ಕಾಮಗಾರಿಗೆ ಸರ್ಕಾರದಿಂದ ೯೯೬ ಕೋಟಿ ರೂ‌ಪಾಯಿ ಬಿಡುಗಡೆಯಾಗಿದ್ದು, ಕಾಲುವೆ ಕಾಮಗಾರಿ ಮಾತ್ರ ತೀರ ಕಳಪೆಯಿಂದ ಕೂಡಿದ್ದಾಗಿದೆ.ಈ ಕಾಮಗಾರಿಯನ್ನು ಗುತ್ತಿಗೆದಾರ ಡಿ.ವಾಯ್ .ಉಪ್ಪಾರ್ ರಿಂದ ನಡೆಯುತ್ತಿದ್ದು,ಸರ್ಕಾರ ಬಿಡುಗಡೆಮಾಡಿದ್ದಂತಹ ಹಣ ಎಲ್ಲಿ ಹೋಗಿದೆ, ಸುಮಾರು 400ಕೋಟಿಗಳಲ್ಲಿ ನಡೆಯಬೇಕಿದ್ದ ಕಾಮಗಾರಿ ಸುಮಾರು ೧೦೦೦ಕೋಟಿ ರೂಪಾಯಿಗಳಲ್ಲಿ ಮಾಡುತ್ತಿದ್ದಾರೆ.ಅಧಿಕಾರಿಗಾಳು ಹಾಗೂ ಗುತ್ತಿಗೆದಾರರು ಹಗಲು ದರೋಡೆ ನಡೆಸುತ್ತಿದ್ದು ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ.ಇದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದು ತಕ್ಷಣವೇ ಕಾಲುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಸರ್ಕಾರ ಇದರ ಬಗ್ಗೆ ಗಮನ‌ಹರಿಸದಿದ್ದರೆ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ ಎಂದು ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ವರದಿ- ವೀರೇಶ್ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment