ತಾಲ್ಲೂಕು ಪಂಚಾಯಿತಿ‌ ಸಾಮಾನ್ಯ ಸಭೆ ರದ್ದಾದ ಹಿನ್ನಲೆಯಲ್ಲಿ ತಾಲ್ಲೂಕು ಪಂಚಾಯಿತಿ ವಿರೋಧಪಕ್ಷದಿಂದ ಸುದ್ದಿಗೋಷ್ಟಿ..!

ಮಳವಳ್ಳಿ: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಜೆಡಿಎಸ್ ಪಕ್ಷದ 11 ಸದಸ್ಯರು ಬಹಿಷ್ಕಾರ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ವಿರೋಧ ಪಕ್ಷನಾಯಕ ನಟೇಶ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಇದ್ದ ತಾ.ಪಂ ಅಧ್ಯಕ್ಷರು ಸದಸ್ಯರ ಗಮನಕ್ಕೆ ತರದೆ ಅನುಮೋದನೆ ಮಾಡಿದ್ದನ್ನು ರದ್ದು ಮಾಡಿ ಎಂದು ಕಳೆದ ಸಭೆಯಲ್ಲಿ ಹೇಳಿದ್ದರೂ ಅನುಮೋದನೆ ಮಾಡಿದ್ದಾರೆ ಅದಕ್ಕೆ ಜೆಡಿಎಸ್ ಪಕ್ಷದ 11 ಸದಸ್ಯರು ಸಭೆಗೆ ಗೈರುಹಾಜರಾಗುವ ಮೂಲಕ ಸಭೆ ಬಹಿಷ್ಕಾರ ಮಾಡಲಾಯಿತು ಎಂದರು. ಕಳೆದ ಬಾರಿ ರದ್ದು ಪಡಿಸುವುದಾಗಿ ಹೇಳಿ ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ . ಈ ಅನುಮೋದನೆಯಿಂ ಲಕ್ಷಾಂತರ ರೂ ಹಗರಣ ನಡೆದಿದೆ ಎಂದು ಆರೋಪಿಸಿದರು.ಇನ್ನೂ ಮಾಜಿ ವಿರೋಧಪಕ್ಷ ನಾಯಕ ಪುಟ್ಟಸ್ವಾಮಿ ರವರು ಮಾತನಾಡಿ,
ಸರ್ವೆ ನಂಬರ್ ಇರುವುದನ್ನು ತಾ.ಪಂ ಸಭೆಯಲ್ಲಿ ನೆಹರು ವಿದ್ಯಾಸಂಸ್ಥೆ ಅನುಮೋದನೆ ನೀಡುತ್ತಿರುವ. ಬಗ್ಗೆ ನಾನು ಅಕ್ಷೇಪ ವ್ಯಕ್ತಪಡಿಸಿದೆ ಆದರೂ ಈ ಹಿಂದೆ ಇದ್ದ ಅಧ್ಯಕ್ಷರು ಯಾವ ಸದಸ್ಯರ ಗಮನಕ್ಕೂ ಬಾರದೆ ಅನುಮೋದನೆ ನೀಡಿದ್ದರು . ಕಳೆದ ಬಾರಿ ಈಗಿನ ಅಧ್ಯಕ್ಷರು ನಡೆಸಿದ ಸಭೆಯಲ್ಲಿಯೂ ಚರ್ಚೆ ಮಾಡಲಾಗಿ ತಾ.ಪಂ ಇಓ ರದ್ದು ಪಡಿಸೋಣ ಎಂದು ಸಭೆ ನಡೆಸಿದರು. ಆದರೆ ಇ-ಓ ಹಾಗೂ ತಾ.ಪಂ‌ಅಧ್ಯಕ್ಷರು., ಉಪಾಧ್ಯಕ್ಷರು ಶಾಮೀಲಾಗಿ ಅನುಮೋದನೆ ಮಾಡಲಾಗಿದೆ. ಎಂದು ಆರೋಪಿಸಿದರು.
ಈ ಅನುಮೋದನೆ ರದ್ದುಯಾಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದರು ಪತ್ರಿಕಾಗೋಷ್ಠಿಯಲ್ಲಿ ತಾ.ಪಂ ಜೆಡಿಎಸ್ ಪಕ್ಷದ 11 ಮಂದಿ ಸದಸ್ಯರು ಹಾಜರಿದ್ದರು.

ವರದಿ : ಎ.ಎನ್ ಲೋಕೇಶ್
ಎಕ್ಸ್‌ಪ್ರೆಸ್‌ ಟಿವಿ
ಮಳವಳ್ಳಿ

Please follow and like us:

Related posts

Leave a Comment