ಅಖಂಡ ಭಾರತ ಸಂಕಲ್ಪ ದಿನ..!

ಮಳವಳ್ಳಿ: ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ಕೃಷ್ಣಾಜನ್ಮಾಷ್ಟಮಿ, ಅಖಂಡ ಭಾರತ ಸಂಕಲ್ಪ ದಿನ ಹಾಗೂ ವಿಶ್ವ ಹಿಂದೂ ಪರಿಷತ್ ಸಂಸ್ಥಾನ ದಿನವನ್ನು ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.
ಮಳವಳ್ಳಿ ಪಟ್ಟಣದ ಕೋಟೆಬೀದಿಯಲ್ಲಿರುವ ಕುಮಾರ ಸಮುದಾಯ ಭವನದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ. ಮಾಗನೂರು ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಹಾಗೂ ಕೃಷ್ಣ ಭಾವ ಚಿತ್ರಕ್ಕೆ ಪುಷ್ವಾರ್ಚನೆ ಮಾಡಲಾಯಿತು.ಮಂಡ್ಯ ಗ್ರಾಮಾಂತರ ಆರ್ ಎಸ್ ಎಸ್ ಮುಖಂಡ ಪ್ರದೀಪ್ ದೀಕ್ಷಿತ್ ಮಾತನಾಡಿ, ಭಾರತದ ಪರಂಪರೆಯನ್ನು ನಾವು ವರ್ಷ ಪೂರ್ತಿ ಹಬ್ಬದ ರೀತಿ ಅಚರಣೆ ಮಾಡುತ್ತೀದ್ದೇವೆ. ಈ ನಿಟ್ಟಿನಲ್ಲಿ ಭಾರತಕ್ಕೆ ಉತ್ತಮ ಸ್ಥಾನಮಾನ ಬಂದಿದೆ ನಮ್ಮ ಧರ್ಮಕ್ಕೆ ಕಂಟಕವಾಗಿರುವವರ ವಿರುದ್ದ ವಿಶ್ವ ಹಿಂದೂ ಪರಿಷತ್ ಹೋರಾಟ ಮಾಡಿಕೊಂಡು ಬಂದಿದೆ ಎಂದರು.ಇನ್ನೂ
ಕಾರ್ಯಕ್ರಮದಲ್ಲಿ ವಕೀಲ ಶ್ರೀಕಂಠಸ್ವಾಮಿ, ಭೌದ್ದಿಕ್ ಪ್ರಮುಖ್ , ಸೇರಿದಂತೆ ಮತ್ತಿತ್ತರರು ಉಪಸ್ಥೀತತರು ಇದ್ದರು…

ವರದಿ-ಎ.ಎನ್ ಲೋಕೇಶ್
ಎಕ್ಸ್‌ ಪ್ರೆಸ್‌ ಟಿವಿ
ಮಳವಳ್ಳಿ

Please follow and like us:

Related posts

Leave a Comment