ಕೊರೋನಾ ಅಬ್ಬರದ ನಡುವೆಯೂ ಗಣೇಶ ಹಬ್ಬದ ಸಂಭ್ರಮಾಚರಣೆ…!

ಶಿರಾ:- ನಗರ ಸೇರಿದಂತೆ ಹಲವಾರು ಕಡೆ ಗಣಪತಿ ದೇವಸ್ಥಾನ ಮತ್ತು ವಿವಿಧ ಬೀದಿಗಳಲ್ಲಿ ಗಣಪನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೂ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಅಲ್ಲಲ್ಲಿ ಗಣಪತಿಯನ್ನು ಕೂರಿಸಲಾಗಿದೆ.
ಗಣೇಶ ಹಬ್ಬವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಹಲವು ಕಡೆ ಬೀದಿಗಳಲ್ಲಿ ಗಣಪತಿಗೆ ಪೆಂಡಾಲ್, ಕೇಸರಿ ತೋರಣ, ಬಾಳೆಕಂದು, ಮಾವಿನ ಸೊಪ್ಪು ತಂದು ಯುವಕರು ಮತ್ತು ಮಕ್ಕಳು ಗಣಪತಿಯನ್ನ ತಂದು ಕೂರಿಸಲಾಗುತ್ತಿದ್ದು ನಗರದ ಎಲ್ಲಾ ಬೀದಿಯ ಹುಡುಗರಲ್ಲಿ ಸಂಭ್ರಮ ಮನೆ ಮಾಡಿದೆ.ನಗರದ ವಿವಿಧ ಕಡೆ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು,
ಎಲ್ಲೆಲ್ಲೂ ಡೊಳ್ಳು ಕುಣಿತ, ಡ್ಯಾನ್ಸ್ ಮೂಲಕ ಗಣಪತಿಯನ್ನು ಟ್ರಿಲ್ಲರ್, ಆಟೋ, ಟಾಟಾ ಏಸ್ ಮೊದಲಾದ ವಾಹನಗಳ ಮೂಲಕ ಬೀದಿ ಬದಿಯಲ್ಲಿ
ಗಣಪನನ್ನು ಕರೆ ತಂದು ಪ್ರತಿಷ್ಠಾಪಿಸಲಾಗುತ್ತಿದೆ.  
ಹಬ್ಬಕ್ಕೆ ಯುವಕರು ಮತ್ತು  ಮಕ್ಕಳು ಹೊಸ ಬಟ್ಟೆ ತೊಡುವ ಮೂಲಕ ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ.
ನಗರದ ಸುಖೀ ನಗರದಲ್ಲಿ ಮಕ್ಕಳು ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ..

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Please follow and like us:

Related posts

Leave a Comment