ರಸ್ತೆ ಅದಗೆಟ್ಟ ಹಿನ್ನೆಲೆ‌ ಅಧಿಕಾರಿಗಳ ಮೌನ… ಸಾರ್ವಜನಿಕರ‌ ಆಕ್ರೋಶಕ್ಕೆ ಕಾರಣವಾಯ್ತಾ..!

ಸಿಂಧನೂರು: ಬ್ರಿಡ್ಜ್ ಪಕ್ಕದಲ್ಲಿ ಗುಂಡಿಗಳು ಬಿದ್ದು ಸಂಪೂರ್ಣ ಹದಗೆಟ್ಟ ರಸ್ತೆ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೇ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು..ನಗರದ ರಾಯಚೂರು ಮುಖ್ಯ ರಸ್ತೆಯ ‌ಗೆ ಅಡ್ಡಲಾಗಿ ಕಟ್ಟಲಾದ ಬ್ರಿಡ್ಜ್ ಪಕ್ಕದಲ್ಲಿ ಗುಂಡಿಗಳು ಬಿದ್ದು ಸಂಪೂರ್ಣ ರಸ್ತೆ ಹದಗೆಟ್ಟದ್ದು ನಿತ್ಯ ದ್ವಿಚಕ್ರ ವಾಹನ, ಸಾವಿರಾರು ಸರಕು ಸಾಗಣೆ, ಸಾರ್ವಜನಿಕ ಸಾರಿಗೆ ವಾಹನಗಳು ಸಂಚಾರ ಮಾಡುತ್ತಿವೆ. ಗುಂಡಿಗಳು ಬಿದ್ದು ವಾಹನ ಚಾಲಕರು ಪರದಾಡುವಂತಾಗಿವೆ.ಜೊತೆಗೆ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ಬ್ರಿಡ್ಜ್ ಮೇಲೆ ರಸ್ತೆ ಹಾಳಾಗಿದೆ. ಇನ್ನೂ ಗುಂಡಿಗಳಿಗೆ ಮಳೆಯ ನೀರು ತುಂಬಿ ದಾಗ ವಾಹನ ಸವಾರನಿಗೆ ಗುಂಡಿ ಕಾಣದೆ ಬಿದರೆ ಜೀವನಕ್ಕೆ ಕುತ್ತು. ಬ್ರಿಡ್ಜ್ ಮೇಲೆ ಸ್ವಚತೆ ಕಾಪಾಡಲು ನಿರ್ಲಕ್ಷ್ಯ ವಹಿಸಿ ಕಾರಣ ಮಳೆಯ ನೀರು ಕೆಳಗೆ ಬೀಳದೆ ಪಾದಚಾರಿ ಗಳಿಗೆ ಸಿಡಿಯುತ್ತದೆ.ಈ ಬಗ್ಗೆ ಯಾವ ಒಬ್ಬ ಅಧಿಕಾರಿಗಳು ಗಮನ ಹರಿಸಿಲ ಎಂದು ಸಾರ್ವಜನಿಕರ ಆರೋಪವಾಗಿದೆ.ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು , ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ್ತಾರ ಅಂತಾ ಕಾದು ನೋಡಬೇಕಿದೆ.

ವರದಿ-ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರ

Please follow and like us:

Related posts

Leave a Comment