ಜಾತ್ರೆ ನಿಷೇಧಿಸಿದ್ದರು ಕ್ಯಾರೆ ಅನ್ನದ ಜನ.. ಸಾಮೂಹಿಕವಾಗಿ ದೇವರ ದರ್ಶನಕ್ಕೆ ಭಕ್ತರ ಎಂಟ್ರಿ..!

ಚಿತ್ರದುರ್ಗ : ಜಿಲ್ಲಾಧಿಕಾರಿ ಜಾತ್ರೆ ನಿಷೇಧ ಆದೇಶ ಮಾಡಿದ್ದರೂ, ಕೂಡಾ ಭಕ್ತರು ಜಾತ್ರೆಯ ರೀತಿಯಲ್ಲಿ ಆಗಮಿಸಿ, ಪೂಜೆ ಸಲ್ಲಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದಿದೆ.ಕೊರೋನಾ ಹರಡುವಿಕೆಯ ನಿಟ್ಟಿನಲ್ಲಿ, ಗೌರಸಮುದ್ರ ಮಾರಮ್ಮದೇವಿಯ ಜಾತ್ರೆಯನ್ನು ಚಿತ್ರದುರ್ಗ ಜಿಲ್ಲಾಡಳಿತ ನಿಷೇಧಿಸಿತ್ತು. ಆದ್ರೆ ಸಾವಿರಾರು ಭಕ್ತರು ಮಾತ್ರ ನಿಷೇಧದ ನಡುವೆಯೂ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅಲ್ಲದೇ ಪೊಲೀಸ್ ಭದ್ರತೆಯ ನಡುವೆ ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆದರು. ಇನ್ನೂ ಜಾತ್ರೆ ನಡೆಯುವ ತುಮಲು ಪ್ರದೇಶದಲ್ಲಿ ಕೂಡಾ ಬೇವಿನ ಸೊಪ್ಪಿನ ಉಡುಗೆ ತೊಡಿಸಿ ಹರಕೆ ತೀರಿಸಿದರು. ಅಲ್ಲದೇ ಜಿಲ್ಲಾಡಳಿತ ನಿಷೇಧಕ್ಕೆ ಕಿಮ್ಮತ್ತು ನೀಡದೆ, ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ ಕೂಡಾ ಆಗಮಿಸಿ ಸಾಮಾಜಿಕ ಅಂತರ ಮರೆತು ದೇವರ ದರ್ಶನ ಪಡೆದರು.ಜಿಲ್ಲಾಡಳಿತ ಆದೇಶಕ್ಕೆ ಹೆದರದ ಭಕ್ತರು, ದೇವಸ್ಥಾನಕ್ಕೆ ಆಗಮಿಸಿ ಜಾತ್ರೆಯ ರೀತಿಯಲ್ಲಿ ಮಾರಮ್ಮನ ದರ್ಶನ ಪಡೆದರು.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment