9 – 12 ನೇ ತರಗತಿ ಮಕ್ಕಳು ಶಾಲೆಗೆ ಹೋಗಬಹುದು : ಆದರೆ ಪಾಠ ಇರುವುದಿಲ್ಲ..!

ಬೆಂಗಳೂರು: ಕೇಂದ್ರ ಸರ್ಕಾರದ ಅನ್ಲಾಕ್ 4.0 ಸೂಚನೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಶಾಲೆ ತೆರೆಯಲು ಅವಕಾಶ ನೀಡಿಲ್ಲ. ಆದರೆ ಪೋಷಕರ ಅನುಮತಿ ಮೇರೆಗೆ ಶಾಲೆಗೆ ತೆರಳಿ ಶಿಕ್ಷಕರ ಬಳಿ ಮಾರ್ಗದರ್ಶನ ಪಡೆಯಬಹುದಾಗಿದೆ. ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಸೆಪ್ಟೆಂಬರ್ 21 ರಿಂದ 9 – 12 ನೇ ತರಗತಿ ಮಕ್ಕಳು ಪೋಷಕರ ಅನುಮತಿ ಪಡೆದು ಶಾಲೆಗೆ ಮಾರ್ಗದರ್ಶನ ಪಡೆಯಲು ಶಾಲೆಗೆ ತೆರಳಬಹುದಾಗಿದೆ. ಮಕ್ಕಳು ಶಾಲೆಗೆ ಬಂದ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡು ಮಾರ್ಗದರ್ಶನ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment